ಕೈಕಂಬ: ಬಜ್ಪೆ ವ್ಯಾಪ್ತಿಯಲ್ಲಿ ಗಲಾಟೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ಸುಂಕದಕಟ್ಟೆ ಪಾಲಿಟೆಕ್ನಿಕ್ ಕಾಲೇಜ್ ಸಮೀಪದ ಅಯ್ಯಪ್ಪ ಶಿಬಿರದ ಮೇಲೆ ಮತಾಂಧರ ಪಡೆ ದಾಳಿ ನಡೆಸಿ ಶರಣು ಕರೆಯದಂತೆ ಆಕ್ಷೇಪಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಈ ಬಗ್ಗೆ ಅಯ್ಯಪ್ಪ ವೃತಧಾರಿಗಳು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ವಿವರ: ಸುಂಕದಕಟ್ಟೆಯ ಪಾಲಿಟೆಕ್ನಿಕ್ ಶಾಲೆಯ ಸಮೀಪ ಅಯ್ಯಪ್ಪ ವೃತಧಾರಿಗಳು ಶಿಬಿರ ನಿರ್ಮಿಸಿದ್ದರು. ಇಂದು ಬೆಳಿಗ್ಗೆ ಮತಾಂಧ ದುಷ್ಕರ್ಮಿಗಳ ಪಡೆ ಆಗಮಿಸಿ ಇಲ್ಲಿ ಶರಣುಹೊಡೆಯದಂತೆ ಎಚ್ಚರಿಸಿದಲ್ಲದೆ, ಇದರಿಂದ ನಮಗೆ ಕಿರಿಕಿರಿ ಆಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ.
ಆದರೆ ಇಂದು ಮಧ್ಯಾಹ್ನ ಹಲವಾರು ಮಂದಿ ದುಷ್ಕರ್ಮಿಗಳ ತಂಡ ಆಗಮಿಸಿ ಶರಣು ಕರೆಯುವುದಕ್ಕೆ ಕಿರಿಕಿರಿ ಆಗುತ್ತದೆ. ಶಿಬಿರವನ್ನು ಎತ್ತಂಗಡಿ ಮಾಡಿ ಎಂದು ಆದೇಶಿಸಿ ಸ್ವಾಮಿಗಳ ಜೊತೆ ಕೈಕೈ ಮಿಲಾಯಿಸಿದ್ದಾರೆನ್ನಲಾಗಿದೆ. ಈ ವೇಳೆ ಎರಡೂ ತಂಡಗಳ ಮಧ್ಯೆ ಹೊಕೈ ನಡೆದಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಎರಡೂ ತಂಡದವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಗುತ್ತದೆ.


