ಬಂಟ್ವಾಳ: ಎರಡು ಮಕ್ಕಳ ತಾಯಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಬೀಯಪಾದೆ ನಿವಾಸಿ ಚಂದ್ರಹಾಸ ಪೂಜಾರಿ ಅವರ ಪತ್ನಿಮೀನಾಕ್ಷಿ ಕಾಣೆಯಾದವರು.
ಡಿ.5ರಂದು ಎಂದಿನಂತೆ ರಾತ್ರಿ ಊಟ ಮಾಡಿ ಗಂಡ ಹೆಂಡತಿ ಮಲಗಿದ್ದರು. ಬೆಳಿಗ್ಗೆ ಚಂದ್ರಹಾಸ ಪೂಜಾರಿ ಎದ್ದು ನೋಡುವಾಗ ಕಾಣೆಯಾಗಿದ್ದಾಳೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸ್ಥಳೀಯ ಯುವಕನ ಜೋತೆ ಮೀನಾಕ್ಷಿ ಹೆಚ್ಚು ಸಲುಗೆಯಿಂದ ಇರುವ ಬಗ್ಗೆ ಸಾರ್ವಜನಿಕವಾಗಿ ಗುಸು ಗುಸು ಮಾತುಗಳು ಕೇಳಿ ಬರುತ್ತಿದ್ದು ಆತನೊಂದಿಗೆ ಪ್ರೇಮಾಂಕುರವಾಗಿ ಪರಾರಿಯಾಗಿರಬಹುದ ಎನ್ನುವ ಶಂಕೆ ವ್ಯಕ್ತವಾಗಿದೆ.

