ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಜ್ಯೂನಿಯರ್ ಎನ್ ಟಿಆರ್, ರಿಷಬ್ ಶೆಟ್ಟಿ ಅವರು ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯವೊಂದು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಮ್ಮನ ಆಸೆ ತೀರಿಸಲು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಜ್ಯೂ.ಎನ್ ಟಿ ಆರ್ ಅವರು, ಗೆಳೆಯ ರಿಷಬ್ ಜೊತೆ ತನ್ನ ತಾಯಿಯ ತವರು ಕುಂದಾಪುರದಲ್ಲಿ ವಿವಿಧ ಸ್ಥಳಗಳಿಗೆ ತೆರಳಿದ್ದಾರೆ. ದೇವಾಲಯದ ಪ್ರಾಕೃತಿಕ ರಮಣೀಯತೆಯನ್ನು ನೋಡಿ ಜ್ಯೂ.ಎನ್ ಟಿ ಆರ್ ಮಾರುಹೋಗಿದ್ದಾರೆ. ಅವರ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್, ನಟ ಪಮೋದ್ ಶೆಟ್ಟಿ ಕೂಡ ಇದ್ದರು.

By suddi9

Leave a Reply

Your email address will not be published. Required fields are marked *