ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಜುಮ್ಮಾ ಮಸೀದಿ ಹೆಸರಿನಲ್ಲಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ಅಕ್ರಮ ವ್ಯವಹಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಒಂಭತ್ತು ಮಂದಿ ವಿರುದ್ಧ ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ ಘಟನೆ ಬುಧವಾರ ನಡೆದಿದೆ.
ರಾಜ್ಯ ವಕ್ಪ್ ಮಂಡಳಿ ಮೂಲಕ ರಚಿಸಲಾದ ಅಡ್ಹಕ್ ಸಮಿತಿ ಬಗ್ಗೆ ಈಗಾಗಲೇ ಹೈಕೋಟರ್ಿನಲ್ಲಿ ಪ್ರಶ್ನಿಸಿ ದಾವೆ ಹೂಡಲಾಗಿದೆ. ನ್ಯಾಯಾಲಯ ವಿಚಾರಣೆ ನಡುವೆಯೇ ಮಸೀದಿ ಹೆಸರಿನಲ್ಲಿ ಸ್ಥಳೀಯ ಒಂಭತ್ತು ಮಂದಿ ಸೇರಿಕೊಂಡು ಅಕ್ರಮ ಧಾಖಲೆ ಪತ್ರ ಸೃಷ್ಟಿಸಿದ್ದಾರೆ ಎಂದು ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
