ಬಂಟ್ಚಾಳ: ಕೃಷಿ ಇಲಾಖೆ ಬಂಟ್ವಾಳ ತಾಲೂಕು ಹಾಗೂ ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಬಂಟ್ವಾಳ ಹೋಬಳಿ ಮಟ್ಟದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಪುಂಜಾಲಕಟ್ಟೆಯ ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘದ ಸುಧನ್ವ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸಾಂಪ್ರದಾಯಿಕ ಭತ್ತದ ಬೆಳೆಯನ್ನು ಬೆಳೆಯದೇ ಹೋದಲ್ಲಿ ಮುಂದಕ್ಕೆ ಅಕ್ಕಿಯ ಕೊರತೆ ಕಾಡಲಿದೆ. ಆದುದರಿಂದ ರೈತರು ತಮಗಿರುವ ಅಲ್ಪ ಕೃಷಿ ಜಾಗದಲ್ಲಿಯಾದರೂ ಭತ್ತದ ಬೆಳೆಯನ್ನು ಬೆಳೆಯುವ ಮೂಲಕ ಭತ್ತ ಕೃಷಿಯನ್ನು ಉಳಿಸಬೇಕು ಎಂದರು. ಕೃಷಿ ಇಲಾಕೆ ಭತ್ತದ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು,  ರೈತರು ಇಂತಹ ತರಬೇತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಂಗಳೂರು  ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕಿ ಕುಮುದಾ ಅವರು ಭತ್ತ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ವಿಟ್ಲ ಸಿಪಿಸಿಆರ್‌ಐನ ವಿಜ್ಞಾನಿ ಡಾ.ಮಧು ಆವರು ಸಂಪನ್ಮೂಲ ವ್ಯಕ್ತಿಯಾಗಿ ಸುರಕ್ಷಿತ ಕೀಟ ನಾಶಕ ಬಗ್ಗೆ ಮತ್ತು ನಿವೃತ್ತ ಕೃಷಿ ಅಽಕಾರಿ ಕೊರಗಪ್ಪ ಅವರು ಬೀಜೋಪಚಾರ ಬಗ್ಗೆ ಮಾಹಿತಿ ನೀಡಿದರು.ತೋಟಗಾರಿಕಾ ಇಲಾಖೆ ಅಽಕಾರಿ ದಿನೇಶ್ ಅವರು ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ ಕುರಿತು ಬಗ್ಗೆ ಮಾಹಿತಿ ನೀಡಿದರು.ಕೃಷಿ ಅಽಕಾರಿ ನಂದನ್ ಶೆಣೈ ಇಲಾಖಾ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಮೂಲಕ ನಡೆಸಲಾದ ಮಣ್ಣು ಪರೀಕ್ಷೆಯ ಆರೋಗ್ಯ ಚೀಟಿಗಳನ್ನು ವಿತರಿಸಲಾಯಿತು.ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ರವಿ ಶಂಕರ ಹೊಳ್ಳ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸುಂದರ ನಾಯ್ಕ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ, ಇವತ್ತೂರು ಗ್ರಾ.ಪಂ.ಅಧ್ಯಕ್ಷೆ ಮಾಲತಿ, ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಽಕಾರಿ ಮಂಜಪ್ಪ ಮೂಲ್ಯ, ಕೃಷಿ ಇಲಾಖೆಯ ಹನುಮಂತ ಕಲಗಿ, ಸಂಘದ ನಿರ್ದೇಶಕರು, ರೈತ ಸದಸ್ಯರು ಉಪಸ್ಥಿತರಿದ್ದರು.


 ಕೃಷಿ ಇಲಾಖೆಯ ನಂದನ್ ಶೆಣೈ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಬಿತಾ ದಿನೇಶ್ ವಂದಿಸಿದರು. ಆತ್ಮ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *