ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾ ಹಾಗೂ ಗೋಳ್ತಮಜಲು ಮಹಾಶಕ್ತಿ ಕೇಂದ್ರದ  ವತಿಯಿಂದ ಕಲ್ಲಡ್ಕ ಶ್ರೀ ರಾಮ  ಮಂದಿರದಲ್ಲಿ ಗುರುಪೂಜೆ ಮತ್ತು ಗುರುದಕ್ಷಿಣೆ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾದ ಡಾ. ಕಮಲಾ ಪ್ರಭಾಕರ್ ಭಟ್ ಅವರಿಗೆ ಬಾಗಿನ ಅರ್ಪಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಖಿತ ಆರ್ ಶೆಟ್ಟಿ, ಮಂಡಲದ ಮಹಿಳಾ ಮೋರ್ಚಾದ  ನೂತನ ಪದಾಧಿಕಾರಿ ಜಯಶ್ರೀ, ಮಹಾ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಲೀಲಾವತಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ರೇಣುಕಾ, ಬೂತ್ ಪ್ರಮುಖರಾದ ವಿದ್ಯಾಶ್ರೀ, ಉಷಾ ಕೃಷ್ಣಕೋಡಿ, ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *