ಬಂಟ್ವಾಳ: ಮನೆ ಮಂದಿ ಬೀಗ ಹಾಕಿ ಹೊರಗಡೆ ಹೋಗಿದ್ದ ಸಂದರ್ಭ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿದ ಕಳ್ಳರು  ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕಿನ ಇರಾ ಗ್ರಾಮದಲ್ಲಿ ಶನಿವಾರ ನಡೆದಿದೆ.


ಈ ಕುರಿತು ವನಿತಾ ಎಂಬವರು ದೂರು ನೀಡಿದ್ದು, ಅವರು ಮತ್ತು ಅವರ ಪತಿ ಬೆಳಗ್ಗೆ ಮನೆಯ  ಮುಖ್ಯಬಾಗಿಲಿಗೆ  ಬೀಗ  ಹಾಕಿ ಕೆಲಸಕ್ಕೆ  ಹೋಗಿದ್ದು, ಸಂಜೆ ವೇಳೆ ಅಕ್ಕ ಪೋನ್ ಮಾಡಿ, ತನ್ನ ಮನೆಯ ಎದುರಿನ  ಬಾಗಿಲಿನ ಬೀಗವನ್ನು ಯಾರೋ ಮುರಿದು ಕಳ್ಳರು ನುಗ್ಗಿರುವಂತೆ  ಕಂಡು ಬರುವುದಾಗಿ ತಿಳಿಸಿದ್ದಾರೆ.


ಈ ಮಾಹಿತಿ ತಿಳಿದು ಕೂಡಲೇ ಮನೆಗೆ ಬಂದು ನೋಡಿದಾಗ, ಮನೆಯ ಎದುರಿನ  ಬಾಗಿಲಿಗೆ ಹಾಕಿದ ಬೀಗವನ್ನು  ಯಾವುದೋ ಸಾಧನದಿಂದ ಮುರಿದಿರುವುದು ಕಂಡುಬಂದಿರುತ್ತದೆ. ಬಳಿಕ  ಮನೆಯ ಒಳಗೆ ಹೋಗಿ ನೋಡಿದಾಗ, ಬೆಡ್ ರೂಮ್ ನಲ್ಲಿದ್ದ ಕಪಾಟನ್ನು ಕಳ್ಳರು ಸಾಧನದಿಂದ ತೆರೆದಿದ್ದು, ಅದರಲ್ಲಿದ್ದ ಬಟ್ಟೆ ಬರೆ  ಹಾಗೂ ಇನ್ನಿತರ ವಸ್ತುಗಳು ಚೆಲ್ಲಾಪಿಲ್ಲಿಗೊಳಿಸಿದಲ್ಲದೆ ಕಪಾಟಿನ ಸೇಫ್ ಲಾಕರ್ ನಲ್ಲಿಟ್ಟಿದ್ದ
69 ಗ್ರಾಂ ತೂಕದ ಚಿನ್ನಾಭರಣಗಳು ಕಳವುಗೈದಿರುವುದು ಬೆಳಕಿಗೆ ಬಂದಿದೆ.

ಇದರ ಮೌಲ್ಯಅಂದಾಜು  4,14 ಲಕ್ಷ ರೂ.ಅಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ‌ನೀಡಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *