ಮೂಡುಬಿದರೆ: 1976ರಲ್ಲಿ ಶ್ರೀ ಮಹಾವೀರ ಕಾಲೇಜಿನ ಕಚೇರಿಯಲ್ಲಿ ಪ್ರಥಮ ದಜರ್ೆ ಸಹಾಯಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ, ನಂತರ ಮುಖ್ಯ ಅಧೀಕ್ಷಕರಾಗಿ ಪದೋನ್ನತಿಗೊಂಡು ಒಟ್ಟು 39 ವರ್ಷಗಳ ಸೇವೆಯನ್ನು ಸಲ್ಲಿಸಿ ನವಂಬರ್ 30ರಂದು ಸೇವೆಯಿಂದ ನಿವೃತ್ತಿ ಹೊಂದಿದ ಪುಷ್ಪಾವತಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್. ಚಂದ್ರಶೇಖರ ದೀಕ್ಷಿತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

