ಮೂಡುಬಿದರೆ: ಅಮಾನವೀಯವಾಗಿ ದನ ಸಾಗಟ ಮಾಡುತ್ತಿದ್ದ ಅಲ್ಟೋ ಕಾರು ಸೋಮವಾರ ಮಧ್ಯಾಹ್ನ ವೇಳೆ ಪುರಸಭಾ ವ್ಯಾಪ್ತಿಯ ಪೇಪರ್ಮಿಲ್ಲ್ ಬಳಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಕಾರಿನಲ್ಲಿದ ಮೂವರು ಪರಾರಿಯಾಗಿದ್ದಾರೆ.
ಬಂಟ್ವಾಳ ಕಡೆಯಿಂದ ಮೂಡುಬಿದರೆಯತ್ತ ಬರುತ್ತಿದ್ದ ಬೆಂಗಳೂರು ನೋಂದಾಣಿ ಸಂಖ್ಯೆಯನ್ನು ಹೊಂದಿರುವ ಅಲ್ಟೋ ಕಾರು( ಕೆಎ.01.ಆರ್.4726) ಅತೀ ವೇಗದಲ್ಲಿ ಪೇಪರ್ಮಿಲ್ಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಸ್ಥಳೀಯರು ಈ ಬಗ್ಗೆ ವಿಚಾರಿಸಿದಾಗ ಕಾರಿನಲ್ಲಿ ಮೂವರು ಪರಾರಿಯಾಗಿದ್ದಾರೆ. ಕಾರಿನೊಳಗಡೆ ಅಮಾನವೀಯ ರೀತಿಯಲ್ಲಿ ತುಂಬಿಸಲಾದ ದನ ಹಾಗೂ ಮಾರಕಾಯುದಗಳು ಪತ್ತೆಯಾಗಿದೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

dana (1)

dana (2)

 

alto

By suddi9

Leave a Reply

Your email address will not be published. Required fields are marked *