ನವದೆಹಲಿ: ಜನಸಾಮಾನ್ಯರಿಗೆ ಮತ್ತೊಂದು ಸಿಹಿ ಸಿಕ್ಕಿದೆ. ಅಂತಾರಾಷ್ಟ್ರೀಯ ಬೆಲೆ ಇಳಿಕೆಯಾದ ಕಾರಣ ಎಲ್ ಪಿ ಜಿ ಸಿಲಿಂಡರ್ ಹಾಗೂ ಪೆಟ್ರೋಲಿಯಂ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಇದರಿಂದ ಭಾರತದಲ್ಲೂ ಅದರ ದರದಲ್ಲಿ ವಿಪರೀತ ಎನಿಸುವಷ್ಟು ಕುಸಿತ ಕಂಡುಬಂದಿದೆ.  ಸಬ್ಸಿಡಿ ಇಲ್ಲದ ಎಲ್’ಪಿಜಿ ಅಡುಗೆ ಅನಿಲದ ಬೆಲೆ ಪ್ರತೀ ಸಿಲಿಂಡರ್’ಗೆ 113 ರೂಪಾಯಿಯಷ್ಟು ಭಾರೀ ಇಳಿಕೆ ಕಂಡಿದೆ. ಹಾಗೆಯೇ, ಜೆಟ್ ಇಂಧನದ ಬೆಲೆ ಶೇ. 4.1ರಷ್ಟು ಇಳಿದಿದೆ.

ಈ ಇಳಿಕೆಯೊಂದಿಗೆ ಸಬ್ಸಿಡಿ ರಹಿತ 14.2 ಕಿಲೋ ಎಲ್’ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 865 ರೂಪಾಯಿಯಿಂದ 752 ರೂಪಾಯಿಗೆ ಇಳಿದಿದೆ. ಕಳೆದ ಐದು ತಿಂಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಪ್ರತಿ ಸಿಲಿಂಡರ್’ಗೆ 170.5 ರೂಪಾಯಿಯಷ್ಟು ಇಳಿಕೆಯಾಗಿದೆ. ಇದರೊಂದಿಗೆ ಕಳೆದ 3 ವರ್ಷಗಳಲ್ಲಿ ಕಮರ್ಷಿಯಲ್ ಎಲ್’ಪಿಜಿ ಸಿಲಿಂಡರ್ ಕಂಡ ಅತ್ಯಂತ ಕಡಿಮೆ ಬೆಲೆ ಇದಾಗಿದೆ.

lpg

By Suddi9

Leave a Reply

Your email address will not be published. Required fields are marked *