ಹಿಂದೂ ಜಾಗೃತಿಯ ರಣಕಹಳೆ

ಮಂಗಳೂರು : ೧೬.೧೧.೨೦೧೪ ರಂದು ಸುರತ್ಕಲ್‌ನ ತಡಂಬೈಲ್‌ನಲ್ಲಿರುವ ಕುಲಾಲ ಭವನದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಧರ್ಮಜಾಗೃತಿ ಸಭೆಯಲ್ಲಿ ೫೦೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದು ತಮ್ಮ ಧರ್ಮಕರ್ತವ್ಯವನ್ನು ಪಾಲಿಸಿದರು. ಸಭೆಯ ಮುಖ್ಯ ವಕ್ತಾರರಾಗಿ ಶ್ರೀರಾಮ ಸೇನೆಯ ಶ್ರೀ. ಪ್ರಮೋದ ಮುತಾಲಿಕ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ, ಸನಾತನ ಸಂಸ್ಥೆಯ ಶ್ರೀ. ರಮಾನಂದ ಗೌಡ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ. ಮಹಾಬಲ ಪೂಜಾರಿ ಕಡಂಬೋಡಿ, ಶ್ರೀ. ಮಹೇಶ ಮೂರ್ತಿ, ಶ್ರೀ. ಶ್ಯಾಮಸುಂದರ ಶೆಟ್ಟಿ, ಶ್ರೀ. ಅನಂತ ಕಾಮತ ಮತ್ತಿತರರ ಗಣ್ಯ ಉಪಸ್ಥಿತರಿದ್ದರು. ಗಣ್ಯರ ದೀಪಪ್ರಜ್ವಲನೆಯೊಂದಿಗೆ ಧರ್ಮಜಾಗೃತಿ ಸಭೆಯನ್ನು ಪ್ರಾರಂಭಿಸಲಾಯಿತು. ಶಂಖನಾದ ಹಾಗೂ ಶ್ರೀ. ವಿನಾಯಕ ಕಾರಂತ ಕಾವುರು ಇವರ ವೇದಮಂತ್ರಪಠಣದಿಂದ ಸಾತ್ವಿಕ ವಾತಾವರಣದಲ್ಲಿ ಸಭೆಯು ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ವಕ್ತಾರರ ಹಸ್ತದಿಂದ ಹಿಂದೂ ಜನಜಾಗೃತಿ ಸಮಿತಿ ಪ್ರಕಾಶಿಸಿದ ಗಂಗಾ ಮಹಾತ್ಮೆ ಗ್ರಂಥ ಪ್ರಕಾಶನ ಮಾಡಲಾಯಿತು. ಹಿಂದೂ ಧರ್ಮಜಾಗೃತಿ ಸಭೆ ನಿಮಿತ್ತದ ವಿಶೇಷಂಕವನ್ನೂ ಬಿಡುಗಡೆ ಮಾಡಲಾಯಿತು.

hjs (1)

hjs (2)

h j s (1)

h j s (2)

h j s (3)


ಸನಾತನ ಸಂಸ್ಥೆಯ ಶ್ರೀ ರಮಾನಂದ ಗೌಡ ಮಾತನಾಡುತ್ತಾ, ಇಂದು ನಾವೆಲ್ಲರೂ ಸೇರಿರುವ ಮುಖ್ಯ ಉದ್ದೇಶವೆಂದರೆ ಎಲ್ಲ ಹಿಂದೂಗಳು ಒಟ್ಟಾಗಿ ಧರ್ಮಜಾಗೃತಿ ಮಾಡಿ ಧರ್ಮಶಕ್ತಿ ಜಾಗೃತಿ ಮಾಡಬೇಕಾಗಿದೆ. ಇಂದು ಹಿಂದೂ ಧರ್ಮದ ಮೇಲೆ ಧರ್ಮೀಯರ ಮೇಲೆ ಯಾವ ರೀತಿ ಆಕ್ರಮಣ ಆಗುತ್ತಿದೆ ಎಂದು ನಾವೆಲ್ಲರೂ ಪ್ರತಿದಿನ ಅನುಭವಿಸುತ್ತಿದ್ದೇವೆ. ಅದಕ್ಕೆ ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರ್ಯಾಯವಾಗಿದೆ ಎಂದು ಹೇಳಿದರು
ಹಿಂದೂಜನಜಾಗೃತಿ ಸಮಿತಿ ಶ್ರೀ. ಗುರುಪ್ರಸಾದ ಇವರು ಮಾತನಾಡುತ್ತಾ, ಇಂದು ಧರ್ಮಜಾಗೃತಿ ಸಭೆಗಳು ಕಳೆದ ೮ ವರ್ಷಗಳಿಂದ ನಡೆಯುತ್ತಿವೆ. ಇಲ್ಲಿಯ ವರೆಗೆ ೯೫೦ ಕ್ಕೂ ಹೆಚ್ಚು ಸಭೆಗಳನ್ನು ದೇಶ ವಿದೇಶಗಳಲ್ಲಿ ಯಶಸ್ವಿಯಾಗಿ ನಡೆಸಿದೆ. ಈ ಬಾರಿ ೧೮ ಸಭೆಗಳನ್ನು ಕರ್ನಾಟಕದಲ್ಲಿ ಆಯೋಜಿಸಿದೆ. ಈ ದೇಶದಲ್ಲಿ ಮತಾಂಧರ ಅಟ್ಟಹಾಸ, ISIS ಸಂಘಟನೆಯು ಭಾರತವನ್ನು ಪ್ರವೇಶಿಸಿ ಹಿಂದೂ ಪುಣ್ಯಭೂಮಿಯನ್ನು ಇಸ್ಲಾಮೀಕರಣ ಮಾಡುವ ಸಂಚು ಇತ್ಯಾದಿ ವಿಷಯಗಳ ಗಂಭೀರತೆಯನ್ನು ಅರಿತು ಹಿಂದೂಗಳು ಸಂಘಟಿತರಾಗಬೇಕು. ಎಲ್ಲಾ ಸಮಸ್ಯೆಗಳಿಗೆ ಹಿಂದೂ ರಾಷ್ಟ್ರವೇ ಪರಿಹಾರ. ೯೮ ನೇ ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿ ಹಿಂದು ರಾಷ್ಟ್ರವೆಂದು ಘೋಷಣೆ ಮಾಡಬೇಕು. 
ಶ್ರೀರಾಮ ಸೇನೆಯ ಶ್ರೀ. ಪ್ರಮೋದ ಮುತಾಲಿಕ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,  ಶೂರವೀರ ಹಿಂದುಗಳ ಭಾರತದೇಶ ಯಾವುದೇ ವಿದೇಶಿಯರ, ಧರ್ಮಾಂಧರ ದಾಳಿಗೆ ನಾಶವಾಗಲಿಲ್ಲ. ಶೂಟರ ತಾರ ಸಹದೇವರ ಮೇಲೆ ನಡೆದ ಹಲ್ಲೆ ಲವ್ ಜಿಹಾದ್ ಇನ್ನು ಜೀವಂತವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಹಿಂದೂಗಳು ಸಹಿಷ್ಣುಗಳು ಅವರು ಯಾವತ್ತೂ ದೇಶ ವಿದೇಶಗಳಿಗೆ ಹೋಗುವಾಗ ಶಸ್ತ್ರ ತೆಗೆದುಕೊಂಡು ಹೋಗದೇ ಶಾಸ್ತ್ರ ತೆಗೆದುಕೊಂಡು ಹೋಗಿದ್ದಾರೆ. ಲವ್ ಜಿಹಾದ್, ಗೋ ಹತ್ಯೆ, ಮತಾಂತರ ತುಂಬಾ ಅಯಿತು ಇನ್ನು ಹೇಳಲಿಕ್ಕೆ ಇಲ್ಲಾ ನಾವೆಲ್ಲರು ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.

By suddi9

Leave a Reply

Your email address will not be published. Required fields are marked *