ಬಂಟ್ವಾಳ : ಮೆಲ್ಕಾರ್ ನಾಗರಿಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಭಾನುವಾರ ಈಡೇರಿದಂತಾಗಿದೆ. ಟ್ರಾಫಿಕ್ ಜಂಜಾಟದಿಂದ ಹಾದಿ ತಪ್ಪಿದ್ದ ಮೆಲ್ಕಾರ್ ಜಂಕ್ಷನ್ನ ಹೆದ್ದಾರಿ ಇಕ್ಕಡೆಗಳಲ್ಲಿ ಎಸ್ಸೆಸ್ಸೆಫ್ ಬೆಳ್ಳಿಹಬ್ಬದ ಕೊಡುಗೆಯಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ಲೋಕಾರ್ಪಣೆ ಮಾಡಿದರು.
ಪ್ರಮುಖ ಜಂಕ್ಷನ್ ಆಗಿ ಬೆಳೆಯುತ್ತಿರುವ ಮೆಲ್ಕಾರ್ನಲ್ಲಿ ಸುವ್ಯವಸ್ಥಿತ ಪ್ರಯಾಣಿಕರ ತಂಗುದಾಣವಿಲ್ಲದೆ ಪ್ರಯಾಣಿಕರು ಹೆದ್ದಾರಿ ಬದಿಯಲ್ಲೇ ಮಳೆ-ಬಿಸಿಲೆನ್ನದೆ ನಿಂತುಕೊಂಡೇ ತಮ್ಮ ವಾಹನಗಳಿಗಾಗಿ ಕಾಯಬೇಕಾದ ದುಸ್ಥಿತಿ ಹಲವು ವರ್ಷಗಳಿಂದ ಕಂಡು ಬರುತ್ತಿತ್ತು. ಈ ಹಿನ್ನಲೆಯಿಂದ ಮೆಲ್ಕಾರ್ ಗೆ ಸೂಕ್ತ ತಂಗುದಾಣದ ತುರ್ತು ಅವಶ್ಯಕತೆ ಇದೆ ಎಂಬ ಆಗ್ರಹ ಸಾರ್ವಜನಿಕರಿಗೆ ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇತ್ತು. ಇದೀಗ ಎಸ್ಸೆಸ್ಸೆಫ್ ತನ್ನ ಬೆಳ್ಳಿಹಬ್ಬ ಆಚರಣೆಯ ಪ್ರಯುಕ್ತ ಮೆಲ್ಕಾರ್ ನಲ್ಲಿ ತಂಗುದಾಣ ನಿರ್ಮಿಸುವ ಕಾರ್ಯಕ್ಕೆ ಕೈ ಹಾಕಿ ಸುಮಾರು 1 ಲಕ್ಷ ರೂಪಾಯಿಯಷ್ಟು ವೆಚ್ವನ್ನು ಭರಿಸಿ ಹೆದ್ದಾರಿಯ ಇಕ್ಕಡೆಗಳಲ್ಲಿ ಪ್ರಯಾಣಿಕರಿಗೆ ಸುಸಜ್ಜಿತವಾಗಿ ತಂಗುದಾಣವನ್ನು ನಿರ್ಮಿಸಿ ಸಿಕೊಟ್ಟು ಕೃತಾರ್ಥವಾಗಿದೆ. 
ಭಾನುವಾರ ಬೆಳಿಗ್ಗೆ ಉಸ್ತುವಾರಿ ಸಚಿವರ ಹಸ್ತದಿಂದ ಇದರ ಉದ್ಘಾಟನಾ ಕಾರ್ಯ ನೆರವೇರಿದ್ದು, ತಾ ಪಂ ಅಧ್ಯಕ್ಷ ಯಶವಂತ ದೇರಾಜೆ, ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮೆಲ್ಕಾರ್ ಬಿರ್ವ ಸೆಂಟರ್ನ ಕೆ ಸಂಜೀವ ಪೂಜಾರಿ, ಸ್ಥಳೀಯ ಸಮಾಜ ಸೇವಕ ರವಳನಾಥ ನಾಯಕ್, ಪ್ರಮುಖರಾದ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬಿ ಎಂ ಅಬ್ಬಾಸ್ ಅಲಿ, ಎಸ್ ಅಬೂಬಕ್ಕರ್ ಸಜಿಪ, ರಫೀಕ್ ಹಾಜಿ ಆಲಡ್ಕ, ಬದ್ರುದ್ದೀನ್ ಮಂಚಿ, ಮಜೀದ್ ಹಾಜಿ ಆಲಡ್ಕ, ಇಬ್ರಾಹಿಂ ಸಖಾಫಿ ಸೆರ್ಕಳ, ಮುಹಮ್ಮದ್ ಅಲಿ ಸಖಾಫಿ ಸುರಿಬೈಲು, ಸಿದ್ದೀಕ್ ಸಖಾಫಿ ಮೂಳೂರು, ಇಬ್ರಾಹಿಂ ಖಲೀಲ್, ಅಬ್ದುಲ್ಲ ಕೊಳಕೆ, ಅಬ್ದುಲ್ ಮಜೀದ್ ಸಖಾಫಿ, ಬಿ.ಎ. ಸಿದ್ದೀಕ್ ಸಅದಿ, ಎನ್.ಎಂ. ಹನೀಫ್ ಮದನಿ, ಅಲ್ತಾಫ್ ಕೊಳಕೆ, ಸಲಾಂ ಸಅದಿ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಉಸ್ತುವಾರಿ ಸಚಿವರಿಗೆ ಮನವಿ ನೀಡಿದ ಸಂಘಟನೆ ಪ್ರಮುಖರು ಮೆಲ್ಕಾರ್ ಜಂಕ್ಷನ್ಗೆ ಟ್ರಾಫಿಕ್ ಪೊಲೀಸ್, ಸಾರ್ವಜನಿಕ ಶೌಚಾಲಯ, ಕಸದ ತೊಟ್ಟಿ, ಕಳ್ಳತನ ನಿಯಂತ್ರಣಕ್ಕೆ ಸಿಸಿ ಕ್ಯಾಮೆರಾ, ಕೆಎಸ್ಆರ್ಟಿಸಿ ಸ್ಟೇಜನ್ನು ಮೆಲ್ಕಾರ್ಗೆ ವಿಸ್ತರಿಸುವುದು ಮೊದಲಾದ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಆಗ್ರಹಿಸಿದರು. 30 ನ



