ಬಂಟ್ವಾಳ: ರಾರಾಸಂ ಫೌಂಡೇಷನ್ ಬಂಟ್ವಾಳ ಇದರ ಆಶ್ರಯದಲ್ಲಿ ೧೩ನೇ ವರ್ಷದ ಸಾಂಸ್ಕೃತಿಕ ಕಲರವ ರಾರಾಸಂಭ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಅತಿಥಿಗಳಾಗಿ ಎಸ್‌ವಿಎಸ್ ಅನುದಾನಿತ ಹಿ. ಪ್ರಾ. ಶಾಲೆ ಪಾಣೆಮಂಗಳೂರು ಇಲ್ಲಿನ  ಮುಖ್ಯ ಶಿಕ್ಷಕ ವಿನೋದ್ ಎನ್.,  ಜೆಸಿಐ ಬಂಟ್ವಾಳದ ನಿಯೋಜಿತ ಅಧ್ಯಕ್ಷೆ ರಶ್ಮಿ ಶೆಟ್ಟಿ,  ಉದ್ಯಮಿ ಸೋಮನಾಥ ಸಾಲಿಯಾನ್ ಉಪಸ್ಥಿತರಿದರು.

ಸಂಜೆ ಯೂನಿಯನ್ ಬ್ಯಾಂಕ್ ಪೊಳಲಿ ಶಾಖೆಯ ಪ್ರಬಂಧಕ  ಪ್ರಸಾದ್ ಕುಮಾರ್ ಮಾರ್ನಬೈಲು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಬಿ. ರಾಮಚಂದ್ರ ರಾವ್, ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷ ಸುಧಾಕರ ಸಾಲ್ಯಾನ್, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಜೆಸಿಐ ಮಡಂತ್ಯಾರಿನ  ನಿಯೋಜಿತ ಅಧ್ಯಕ್ಷ ವಿಕೇಶ್ ಮಾನ್ಯ ಭಾಗವಹಿಸಿದ್ದರು. ಬಹುಮುಖ ಪ್ರತಿಭೆ ಶ್ರೀನಿಧಿ ಪಿ.ಎಸ್. ಅವರಿಗೆ ರಾರಾಸಂ ಪುರಸ್ಕಾರ ನೀಡಿ ಗೌರವಿಸಲಾಯಿತು. 

ರಾರಸಂ ಫೌಂಡೇಷನ್‌ನ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಪ್ರಾಸ್ತವಿಕವಾಗಿ ಮಾತನಾಡಿದರು, ನಿರ್ದೇಶಕ ಕೇಶವ ಮಾಸ್ಟರ್ ಮಾರ್ನಬೈಲು ಸ್ವಾಗತಿಸಿ, ನಾಗೇಶ್ ಬಾಳೆಹಿತ್ಲು ವಂದಿಸಿದರು, ದಾಮೋದರ ಮಾಸ್ಟರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಮುಕ್ತ ವಿಭಾಗದಲ್ಲಿ ವಿವಿಧ ಸ್ಪರ್ಧಾ ಕೂಟ ನಡೆಯಿತು.

By suddi9

Leave a Reply

Your email address will not be published. Required fields are marked *