ಬಂಟ್ವಾಳ : ಶ್ರೀ ಗೋಪಾಲ್ಕೃಷ್ಣ ವಿಶ್ವಸ್ಥ ಮಂಡಳಿಯ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗೋಪಾಲ್ಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಕಾಸರಗೋಡ್ ಇವರಿಂದ 02-01-2015ನೇ ಶುಕ್ರವಾದಿಂದ 06-01-2015ನೇ ಮಂಗಳವಾರದವರೆಗೆ ಮಂಚಿ ಕನಕಗಿರಿಯಲ್ಲಿ ಯಕ್ಷೊತ್ಸವ , 07-01-2015 ರಂದು ಶ್ರೀ ಮಹಾವಿಷ್ಣು ಯಾಗ , 08-01-2015ರಂದು ಕಟೀಲು ಮೇಳದ ಸೇವಾ ಬಯಲಾಟ ಜರಗಲಿದೆ .

ದಿನಾಂಕ 02-01-2015ರಿಂದ ಮೊದಲ್ಗೊಂಡು 09-01-2015ರ ಬೆಳಗ್ಗಿನವರೆಗೆ ಜರಗುವ ವಿವಿಧ ಧಾರ್ಮಿಕ ಕಾರ್ಯಕ್ರಮ , ಭಜನೆ , ಅನ್ನದಾನ , ಅಯ್ಯಪ್ಪ ಭಕ್ತರಿಂದ ಇರುಮುಡಿ ಕಟ್ಟಿ ಶಬರಿಮಲೆಗೆ ಹೊರಡುವ ಕಾರ್ಯಕ್ರಮ ಜರಗಲಿದೆ . ಈ ಧಾರ್ಮಿಕ ಮಹೋತ್ಸವಕ್ಕೆ ಸಂಬಂಧಿಸಿದ ಆಮಂತ್ರಣ ಪತ್ರವನ್ನು ಮಾದಕಟ್ಟೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು . ದೇವಸ್ಥಾನದ ಟ್ರಸ್ಟಿ ಹಿರಿಯ ಕೃಷಿಕರು ಆದ ಶಿವರಾಂ ಶೆಟ್ಟಿ ಬಾರೆಬೆಟ್ಟು ಬಿಡುಗಡೆಗೊಳಿಸಿ ಶುಭ ಹಾರೈಸಿದರು . ಗೋಪಾಲ್ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು . ಕಾರ್ಯಕ್ರಮದ ಸಂಯೋಜಕರಾದ ಕೈಯೂರು ನಾರಾಯಣ ಭಟ್ , ಸಂಪೂರ್ಣ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ದಾಮೋದರ ರೈ ಬಾರೆಬೆಟ್ಟು , ಬಾಲಕೃಷ್ಣ ಅಡ್ಯಂತಾಯ , ತೇಡ್ಲ ಶೀನ ಪೂಜಾರಿ , ಮಜಿ ರಾಮ ಭಟ್ , ಬಾಲಕೃಷ್ಣ ಸೆರ್ಕಳ , ಗೌರವ ಸಲಹೆಗಾರರಾದ ಪತ್ತುಮುಡಿ ವಿಠಲ ಪ್ರಭು , ಅಧ್ಯಕ್ಷ ಸಿ.ಎಚ್.ಸೀತಾರಾಮ ಶೆಟ್ಟಿ , ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಂಚಿ , ಭವಾನಿಶಂಕರ ಟಿ.ಕೆ. , ವಿಶ್ವನಾಥ ಬಂಗೇರಾ, ಶ್ರೀದೇವಿ ಕೈಯೂರು , ವಾರಿಜ ಶೆಟ್ಟಿ , ಜಯಂತಿ ಶೆಟ್ಟಿ ಉಪಸ್ಥಿತರಿದ್ದರು .
