ಕೈಕಂಬ: ಅಸಮರ್ಪಕ ನೀರು ಪೂರೈಕೆ, ಕಲುಷಿತ ನೀರು, ನೀರಿನ ದುಬಾರಿ ದರ, ಕರಿಯಂಗಳ ಪಂ. ಅಧಕ್ಷರ ಮನೆಗೆ ಮುಕ್ಕಾಲು ಇಂಚಿನ ಪೈಪ್ನಲ್ಲಿ ನೀರು ಪೂರೈಕೆ ಮುಂತಾದ ಆರೋಪಗಳನ್ನು ಹೊತ್ತ ಎಸ್ಡಿಪಿಐ ಕಾರ್ಯಕರ್ತರು ಕರಿಯಂಗಳ ಪಂಚಾಯತ್ ವಿರುದ್ಧ ಪ್ರತಿಭಟನೆ ನಡೆಸಿದ್ದೇ ಅಲ್ಲದೆ ಕರಿಯಂಗಳ ಗ್ರಾಮ ಪಂಚಾಯತ್ಗೆ ಮುತ್ತಿಗೆ ಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ದ.ಕ. ಜಿಲ್ಲಾ ಅಧ್ಯಕ್ಷ ಕೂಸಪ್ಪ, ಅಮ್ಮುಂಜೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಏಕಾಏಕಿ ನೀರಿನ ದರ ಪರಿಷ್ಕರಣೆಯ ಹಾಗೂ ನೀರಿನ ಸಂಪರ್ಕದ ಬಗ್ಗೆ ಕರಿಯಂಗಳ ಪಂಚಾಯತ್ನವರು ನೋಟೀಸ್ ನೀಡಿದ್ದಾರೆ. ಆದರೆ ಇನ್ನೂ ಕೂಡಾ ನೀರಿನ ಸರಿಯಾದ ಪೂರೈಕೆಯಾಗುತ್ತಿಲ್ಲ. ನೀರಿನ ಬಗ್ಗೆ ನೋಟೀಸ್ಗೆ ನಮ್ಮ ವಿರೋಧವಿದೆ. ನೀರಿನ ಕನಿಷ್ಠ ದರ 50 ರೂ. ಜಾರಿಗೊಳಿಸಬೇಕು, ಹಾಗೂ ಪ್ರತೀ ಕುಟುಂಬಕ್ಕೆ ತಿಂಗಳಿಗೆ 20 ಸಾವಿರ ಲೀಟರ್ ನೀರನ್ನು 50 ರೂಗೆ ನೀಡಬೇಕು, ನೀರಿಗೆ ಮೀಟರನ್ನು ಪಂಚಾಯತ್ ವತಿಯಿಂದ ಅಳವಡಿಸಬೇಕು ಎಂದು ಮುಂತಾದ ಬೇಡಿಕೆಗಳ ಬಗ್ಗೆ ಕೂಸಪ್ಪ ಮಾತಾಡಿದ್ದಾರೆ.
ಪಂಚಾಯತ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಕರಿಂಗಳ ಪಂ. ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದ್ದಾರೆ, ಕಲುಷಿತ ನೀರನ್ನು ಬಾಟಲಿಯಲ್ಲಿ ಹಿಡಿದುಕೊಂಡು ಬಂದ ಪ್ರತಿಭಟನಾಕಾರರು ಅದನ್ನು ಸಭೆಯಲ್ಲಿ ಪ್ರದಶರ್ಿಸಿದರು. ನೀರಿನ ಸಮಸ್ಯೆ ಬಗೆಹರಿಯದೇ ಇದ್ದರೆ ಮುಂದಿನ ದಿನಗಳಲ್ಲಿ ಪಂಚಾಯತ್ಗೆ ಬೀಗ ಜಡದು ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಚುನಾವಣೆಯ ಸಂದರ್ಭ ಮನೆಗೆ ಓಟು ಕೇಳಿಕೊಂಡು ಬರುವ ಪ್ರತಿಭಟನಾಕಾರರನ್ನು ಪೊರಕೆ ಹಿಡಿದು ಓಡಿಸಲಾಗುವುದು. ಎಂದು ಎಚ್ಚರಿಕೆ ನೀಡಿದರು.
ಎಸ್ಡಿಪಿಐ ಕಾರ್ಯಕರ್ತರ ಮನವಿ ಸ್ವೀಕರಿಸಲು ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಓ ಇಲ್ಲದಿರುವುದರಿಂದ ಕಾರ್ಯಕರ್ತರು ಇನ್ನಷ್ಟು ಗರಂ ಆಗಿದ್ದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಅಧ್ಯಕ್ಷ ಉಸ್ಮಾನ್ ಕುಲಾಯಿ, ಎಸ್ಡಿಪಿಐ ಮುಖಂಡರಾದ ಮುಹ್ಹಮದ್, ಸದಕತ್, ರಝಾಕ್, ಸ್ಟ್ಯಾನಿ ಮೆನೆಜಸ್ ಮುಂತಾದವರು ಭಾಗವಹಿಸಿದ್ದರು.



















