ಉಳ್ಳಾಲ:ಇಲ್ಲಿಯ ತಾಲೂಕಿನ ಮುನ್ನೂರು ಗ್ರಾಮದ ಸೋಮನಾಥ ಉಳಿಯ ಶ್ರೀ ಸೋಮೇಶ್ವರಿ ಮಹಿಳಾ ಮಂಡಳಿಯ
11 ನೇ ವಾರ್ಷಿಕ ಮಹಾಸಭೆಯ ಉಳಿಯ ಶ್ರೀ ಸೋಮೇಶ್ವರೀ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಶೀಲ ಯು.ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು.

ಶ್ರೀಕ್ಷೇತ್ರ ಸೋಮನಾಥ ಉಳಿಯ ಆಡಳಿತ ಸಮಿತಿ ಅಧ್ಯಕ್ಷ ಉಮಾನಾಥ ನಾಯಕ್,ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧಗಯಕ್ಷ ನರಸಿಂಹ ನಾಯಕ್ ಹರೇಕಳಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷೆ ಶಾಂತ, ಕಾರ್ಯದರ್ಶಿ ಉಷಾ ದಯಾನಂದ ನಾಯಕ್ ಕಲ್ಲಾಪು ರವರು ವೇದಿಕೆಯಲ್ಲಿದ್ದರು.ಕೋಶಾಧಿಕಾರಿ ನಳಿನಿ ಎಸ್ ನಾಯಕ್
ಸ್ವಾಗತಿಸಿ,ಲೆಕ್ಕಪತ್ರ ,ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ರೇಣುಕಾ ಕಲ್ಲಾಪು ಕಾರ್ಯಕ್ರಮ ನಿರೂಪಿಸಿದರು.
