ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಚಂಪಾಷಷ್ಠಿಯ ಅಂಗವಾಗಿ ಈ ಪ್ರಯುಕ್ತ ದೇಗುಲದ ಆವರಣದಲ್ಲಿ ಮಡೆಮಡೆಸ್ನಾನ ಸಹಿತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನ.27ರಂದು ಗುರುವಾರ ಜರುಗಿತು.

ಮಡೆಮಡೆಸ್ನಾನ ಮಾಡುವ ಭಕ್ತರಿಗೆ ದೇಗುಲದ ಪ್ರಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆ ಪ್ರಾಂಗಣದಲ್ಲಿ ಬ್ರಾಹ್ಮಣರ ಭೋಜನ ಸ್ವೀಕಾರದ ಬಳಿಕ ಮಡೆಮಡೆಸ್ನಾನ ಹಾಕಲು ಭಕ್ತರು ಸ್ಥಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬಂದು ಹೋರಾಂಗಣದ ದ್ವಜಸ್ಥಂಭದ ಎದುರು ಗೋವಿಂದಾರಿ ಗೋವಿಂದ ಹೇಳುತ್ತಾ ಬಹಳ ಸಮದಿಂದಲೇ ಕಾಯುತ್ತಿರುವ ದೃಶ್ಯ ಕಂಡುಬಂದಿತು. ಬ್ರಾಹ್ಮಣರು ಊಟ ಮುಗಿಸಿದ ನಂತರ ಮಡೆಸ್ನಾನಕ್ಕಾಗಿ ಹರಕೆ ಹೊತ್ತುಕೊಂಡಿದ್ದ ಭಕ್ತರು ಬ್ರಾಹ್ಮಣರ ಊಟವಾದ ಬಳಿಕ ದೇವಳದ ಅರ್ಚಕ ದ್ವಜಸ್ಥಂಭದ ಹತ್ತಿರ ಬಂದು ತೆಂಗಿನಕಾಯಿ ಹೊಡೆದ ಬಳಿಕ ಭಕ್ತರು ಮೂರು ಸುತ್ತು ಹೊರಳಾಡುವ ಮೂಲಕ ತನ್ನ ಹರಕೆಯನ್ನು ತೀರಿಸಿಕೊಂಡರು. ಕೆಲವರು 30,35 ವರ್ಷದಿಂದ ಹರಕೆ ಹೊತ್ತು ಮಡೆಸ್ನಾನ ಮಾಡುವುವರು ಇದ್ದರು ವಯಸ್ಸಾದ ಹೆಂಗಸರು, ಮಕ್ಕಳು ಗಂಡಸರು ಈ ಮಡೆಮಡೆಸ್ನಾನದಲ್ಲಿ ಹೆಚ್ಚಾಗಿ ಕಂಡುಬಂದರು. ಮಡೆಸ್ನಾನ ತೀರಿಸಿ ಸಂತುಷ್ಟರಾದ ಬಳಿಕ ಭಕ್ತರು ಜಳಕ ಮಾಡಿ ಮಡಿವಸ್ತ್ರ ಧರಿಸಿದರು.
ಷಷ್ಠಿಯ ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೊದಲು ದೇಗುಲದ ಆವರಣದಲ್ಲಿ ಬಲಿ ಉತ್ಸವ ನಡೆದ ಬಳಿಕ ಬೆಳ್ಳಿಯ ರಥ ಹಾಗೂ ಇನ್ನೊಂದು ದೊಡ್ಡ ರಥವನ್ನು ಎಳೆಯಲಾಯಿತು. ಅದೂ ಅಲ್ಲದೆ ದೇಗುಲದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇಗುಲದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಸರ್ವಮಂಗಳಾ ಕಲ್ಯಾಣ ಮಂಟಪದಲ್ಲಿ ಊಟಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ದೇವಳದ ಆಡಳಿತಮುಕ್ತೆಸರರಾದ ಅಮ್ಮುಂಜೆ ಡಾ. ಮಂಜಯ್ಯ ಶೆಟ್ಟಿ, ಚೇರಾ ಸೂರ್ಯನಾರಾಯಣರಾವ್, ದೇವಳದ ಪ್ರಧಾನ ಅರ್ಚಕ ಮಾದವಭಟ್, ನಾರಾಯಣ ಭಟ್, ರಾಮ್ಭಟ್ ತಂತ್ರಿಗಳಾದ ಸುಭ್ರಹ್ಮಣ್ಯ ಭಟ್ ದೇವಳದ ಕಾರ್ಯನಿರ್ವಹಣಾಧಿಕಾರಿ ಹರಶ್ವಂದ್ರ ಮತ್ತಿತರರು ಉಪಸ್ಥಿತರಿದ್ದರು.
















