ಸಿಡ್ನಿ : ಕಳೆದ ಮಂಗಳವಾರ ಬಾಲ್ ಬೌನ್ಸರ್ ಆಗಿ ತಲೆಗೆ ಏಟು ತಿಂದು ಕೋಮಾಕ್ಕೆ ಜಾರಿದ್ದ ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಗುರುವಾರ ವಿಧಿವಶರಾಗಿದ್ದಾರೆ. ಸಿಡ್ನಿಯ ಶೆಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು.
ಸಿಡ್ನಿಯಲ್ಲಿ ನಡೆಯುತ್ತಿದ್ದ ನ್ಯೂ ಸೌತ್ ವೇಲ್ಸ್ ಮತ್ತು ಸೌತ್ ಆಸ್ಟ್ರೇಲಿಯಾ ನಡುವೆ ನಡುವೆ ನಡೆಯುತ್ತಿದ್ದ ನಾಲ್ಕುದಿನದ ಶೆಫೀಲ್ಡ್ ಶೀಲ್ಡ್ ಪಂದ್ಯ ನಡೆಯುತ್ತಿದ್ದ ವೇಳೆ ಸೌತ್ ಆಸ್ಟ್ರೇಲಿಯ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಹ್ಯೂಸ್ ಒಟ್ಟು 63 ರನ್ ಗಳಿಸಿದ್ದು, ಒಟ್ಟು 9 ಬೌಂಡರಿಗಳನ್ನು ಹೊಡೆದಿದ್ದರು.

ಬ್ಯಾಟಿಂಗ್ ವೇಳೆ ನ್ಯೂ ಸೌತ್ ವೇಲ್ಸ್ನ ಮಧ್ಯಮ ವೇಗಿ ಸೀನ್ ಅಬೋಟ್ ಎಸೆದ ಬೌನ್ಸರಿಗೆ ಹಿಟ್ ಮಾಡಲು ಹ್ಯೂಸ್ ಯತ್ನಿಸಿದಾಗ ಚೆಂಡು ಹೆಲ್ಮೆಟ್ ಮೂಲಕ ತಲೆಗೆ ಬಂದು ಬಡಿದಿತ್ತು. ಸ್ವಲ್ಪ ಹೊತ್ತು ಬೆನ್ನು ಬಗ್ಗಿಸಿ ನಿಂತು ಹ್ಯೂಸ್ ನಂತರ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದರು. ತಲೆಯಿಂದ ರಕ್ತ ಸುರಿಯುತ್ತಿದ್ದು, ವೈದ್ಯ ಜಾನ್ ಆರ್ಚಡರ್್ ತುತರ್ು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಈ ಘಟನೆ ನಡೆದ ನಂತರ ಪಂದ್ಯವನ್ನು ಅಲ್ಲಿಗೇ ರದ್ದುಗೊಳಿಸಲಾಗಿತ್ತು.
ಫಿಲಿಪ್ ಜೋಯೆಲ್ ಹ್ಯೂಸ್ `ಫಿಲ್ ಹ್ಯೂಸ್’ ಎಂದೇ ಜನಜನಿತರಾಗಿದ್ದಾರೆ. 25ರ ಹರೆಯದ ಎಡಗೈ ಆರಂಭಿಕ ದಾಂಡಿಗನಾಗಿರುವ ಹ್ಯೂಸ್ 2009ರಕಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ ಒಟ್ಟು 26 ಟೆಸ್ಟ್ ಪಂದ್ಯಗಳನ್ನಾಡಿರುವ ಇವರು 3 ಶತಕ, 7 ಅರ್ಧಶತಕ ಬಾರಿಸಿದ್ದು ಒಟ್ಟು 1,535 ರನ್ ಗಳಿಸಿಕೊಂಡಿದ್ದಾರೆ. 25 ಏಕದಿನ ಪಂದ್ಯಗಳನ್ನು ಆಡಿ, 836 ರನ್ ಗಳಿಸಿರುವ ಇವರು ಏಕದಿನ ಪಂದ್ಯಗಳಲ್ಲಿ 2 ಶತಕ , 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ವಿಕೆಟ್ ಕೀಪಿಂಗ್ ಮೂಲಕವೂ ಗುರುತಿಸಿಕೊಂಡಿದ್ದ ಹ್ಯೂಸ್ ಟೆಸ್ಟ್ನಲ್ಲಿ ಅನುಭವಿ ಕ್ರಿಕೆಟರ್ ಎಂದೆನಿಸಿಕೊಂಡಿದ್ದರೂ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಲು ಸಾಧ್ಯವಾಗಿರಲಿಲ್ಲ. ಸ್ವಲ್ಪ ಎಡವಿದರೂ ಕ್ರಿಕೆಟ್ನಿಂದ ಅಪಾಯ ತಪ್ಪಿದ್ದಲ್ಲ ಎಂಬುವುದನ್ನು ಪಂದ್ಯ ತೋರಿಸಿಕೊಟ್ಟಿದೆ.

