ಬಂಟ್ವಾಳ:  ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ  2023 – 24ನೇ ಸಾಲಿನ ಮರುವಿನ್ಯಾಸಗೊಳಿಸಲಾದ  ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆ, ಕರಿಮೆಣಸು ಬೆಳೆಗಳಿಗೆ ಬೆಳೆ ವಿಮೆ ಪಾವತಿಗೆ ಆರಂಭವಾಗಿದ್ದು  ಜುಲೈ ತಿಂಗಳ  31 ರವರೆಗೆ  ವಿಮಾ ಕಂತನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ನಿ.ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಯೋಜನೆಯ ಸೌಲಭ್ಯ ಪಡೆಯಲು ಸಾಲ ಪಡೆದಿರುವ ರೈತರು ತಮ್ಮ ಜಮೀನಿನ ಪಹಣಿಯನ್ನು ಆಧಾರ್ ನೊಂದಿಗೆ ಕಡ್ಡಾಯವಾಗಿ ಜೋಡಣೆಯಾಗಿರಬೇಕು.ರೈತರು ಅಡಿಕೆ ಬೆಳೆಗೆ ಒಂದು ಎಕ್ರೆಗೆ 2590 ರೂ. ಹಾಗೂ ಕರಿಮೆಣಸು ಎಕ್ರೆಗೆ 951ರೂ.ವಿಮೆ ಕಂತು ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ.

ಬೆಳೆ ಸಾಲ ಪಡೆದಿರುವ ಎಲ್ಲಾ ಕೃಷಿಕರು  ತಮ್ಮ ಜಮೀನಿನ ಆರ್. ಟಿ. ಸಿ. ಯೊಂದಿಗೆ ಆಧಾರ್ ಕಾರ್ಡ್,ಎಸ್ .ಸಿ .ಡಿ .ಸಿ .ಸಿ  ಬ್ಯಾಂಕ್ ಪಾಸ್ ಪುಸ್ತಕ, ನಾಮಿನಿದಾರರ ಆಧಾರ್ ಪ್ರತಿಯನ್ನು  ನಿಗದಿತ ಅವದಿಯೊಳಗೆ ತಮ್ಮ ಕಾರ್ಯವ್ಯಾಪ್ತಿಯ ಪ್ರಾಥಮಿಕ ಸಹಕಾರ ಸಂಘದ ಕಚೇರಿಯನ್ನು ಸಂಪರ್ಕಿಸಿ ವಿಮೆ ಕಂತು ಪಾವತಿಸಿ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯುವಂತೆ ಪ್ರಭು ಪ್ರಕಟಣೆಯ ಮೂಲಕ  ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *