ಒಡಿಯೂರು ಜನ್ಮದಿನೋತ್ಸವ ಪ್ರಯುಕ್ತ ಉಚಿತ ಕಣ್ಣು ತಪಾಸಣಾ ಶಿಬಿರ
ಬಂಟ್ವಾಳ: ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಬೋಳಿಯಾರು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೋಳಿಯಾರು ಘಟಕದ ವತಿಯಿಂದ ಉಚಿತ ಕಣ್ಣು ತಪಾಸಣಾ ಶಿಬಿರವು ಬೋಳಿಯಾರು ಅಮರದೀಪ ಸಭಾಭವನದಲ್ಲಿ ನಡೆಯಿತು.
ಜಯರಾಮಸಾಂತ ಶಿಬಿರದ ಉದ್ಘಾಟನೆಗೈದು ಶುಭಹಾರೈಸಿದರು.ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು ಅಧ್ಯಕ್ಷತೆ ವಹಿಸಿದ್ದರು.

ಬೋಳಿಯಾರು ಗ್ರಾ.ಪಂ.ಅಧ್ಯಕ್ಷೆ ಜೆಸಿಂತಾ ಪಿಂಟೋ,ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ನೇಮಿರಾಜ ಶೆಟ್ಟಿ, ಯುವ ಬಳಗದ ಹಿರಿಯ ಸಲಹೆಗಾರರಾದ ಶ್ರೀಧರ ಶಟ್ಟಿ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೋಳಿಯಾರು ಘಟಕದ ಅಧ್ಯಕ್ಷೆ ಶಾರದ,ಡಾ.ಅಹನಾ ವೇದಿಕೆಯಲ್ಲಿದ್ದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಲಯ ಸಂಯೋಜಕಿ ಜಯಲಕ್ಷ್ಮಿ ಪ್ರಭು ಪ್ರಸ್ತಾವನೆಗೈದರು.ಸೇವಾದೀಕ್ಷಿತೆ ಮಾಲಿನಿ ಸ್ವಾಗತಿಸಿದರು.ಕಾರ್ಯದರ್ಶಿ ಆಶಾ ವಂದಿಸಿದರು.ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.ಬೋಳಿಯಾರು ಯುವ ಬಳಗ (ರಿ) ಇದರ ಆಶ್ರಯದಲ್ಲಿನಡೆದ ಈ ಶಿಬಿರವು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಗ್ರಾಮೋತ್ಸವದ ಪ್ರಯುಕ್ತ ಸೇವಾ ಸಂಭ್ರಮ ಒನ್ ಸೈಟ್ಎಸ್ಸಿಲಾರ್ ಲಕ್ಸೋಟಿಕ್ ಪೌಂಡೇಶನ್ ಬೆಂಗಳೂರು,ಮಂಗಳೂರು ಪ್ರಸಾದ್ ನೇತ್ರಾಲಯ,ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್,ಜಿಲ್ಲಾ ಆರೋಗ್ಯ ಮತ್ರು ಕುಟುಂಬಕಲ್ಯಾಣ ಸೊಸೈಟಿ ( ಅಂಧತ್ವ ವಿಭಾಗ),ಡಾ.ಪಿ.ದಯಾನಂದ ಪೈ ಹಾಗೂ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ನಡೆಯಿತು.