ಬಂಟ್ವಾಳ:ಕಳೆದ 15 ವರ್ಷಗಳ ಹಿಂದೆ ಎರಡೂವರೆ ಎಕರೆ ಗದ್ದೆ ಉಳುಮೆ ಮತ್ತು ನೇಜಿ ನಾಟಿ ಮಾಡಲು 10 ಮಂದಿ ಕಾಮರ್ಿಕರಿಗೆ 15 ದಿನ ಬೇಕಿತ್ತು. ಇದೀಗ ಯಾಂತ್ರಿಕ ಕೃಷಿ ಪದ್ಧತಿಯಡಿ ಕೇವಲ ಒಂದೇ ದಿನದಲ್ಲಿ ರೂ 4 ಸಾವಿರ ವೆಚ್ಚದಲ್ಲಿ ನೇಜಿ ನಾಟಿ ಮಾಡಿ ಫಲವತ್ತಾದ ಭತ್ತದ ಪೈರು ಬೆಳೆಸಲು ಸಾಧ್ಯವಾಗಿದೆ ಎಂದು ಹಿರಿಯ ಪ್ರಗತಿಪರ ಕೃಷಿಕ ಮಾಣಿಕ್ಯರಾಜ್ ಜೈನ್ ಮಾಂಗಾಜೆಗುತ್ತು ಹೇಳಿದ್ದಾರೆ.

ಇಲ್ಲಿನ ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಾಂಬಿಲ ಶ್ರೀ ಅಗ್ನಿದುಗರ್ೆ ದೇವಸ್ಥಾನ ಬಳಿ ಗುರುವಾರ ಏರ್ಪಡಿಸಿದ್ದ ‘ಯಂತ್ರಶ್ರೀ ತರಬೇತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿದರ್ೇಶಕ ಮಹಾಬಲ ಕುಲಾಲ್ ಮಾತನಾಡಿ, ಧರ್ಮಸ್ಥಳ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿಕರಿಗೆ ಕಡಿಮೆ ವೆಚ್ಚದಲ್ಲಿ ಲಾಭದಾಯಕ ಯಾಂತ್ರಿಕ ಕೃಷಿ ಬಗ್ಗೆ ತರಬೇತಿ ನೀಡಿ ಪರಿವರ್ತನೆಗೊಳಿಸಿದೆ ಎಂದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಶುಭ ಹಾರೈಸಿದರು.
ಕೃಷಿ ಅಧಿಕಾರಿ ಜನಾರ್ದನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಬಾಂಬಿಲ ಕ್ಷೇತ್ರದ ಧರ್ಮದಶರ್ಿ ರಾಘವ ಸುವರ್ಣ, ವಲಯ ಮೇಲ್ವಿಚಾರಕಿ ಸವಿತಾ, ವಲಯಾಧ್ಯಕ್ಷ ಉಮೇಶ್, ಸೇವಾ ಪ್ರತಿನಿಧಿ ರೇಖಾ ಕಾಡಬೆಟ್ಟು, ಮೋಹನದಾಸ ಗಟ್ಟಿ, ಸುಮಿತ್ರಾ, ರಜನಿ ಮತ್ತಿತರರು ಇದ್ದರು.ಯೋಜನೆ ಸದಸ್ಯ ಮೋಹನಾನಂದ ಸ್ವಾಗತಿಸಿ, ಸೇವಾ ಪ್ರತಿನಿಧಿ ಮಾಧವ ವಂದಿಸಿದರು.
