ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೨೦೨೩-೨೪ನೇ ಶೈಕ್ಷಣಿಕ ವರ್ಷದ ಶಾಲಾರಂಭವು ದಿನಾಂಕ ೩೧-೦೫-೨೦೨೩ರಂದು ಸಂಸ್ಥೆಯಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ ಪ್ರಭಾಕರ್ ಭಟ್‌ಕಲ್ಲಡ್ಕ ಭಾರತಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ ಪ್ರಭಾಕರ್ ಭಟ್‌ಕಲ್ಲಡ್ಕ ಮಾತಾನಾಡುತ್ತಾ, ಶ್ರೀರಾಮ ಸಂಸ್ಥೆಯು ಕಲಿಕೆ, ಆಚಾರ- ವಿಚಾರ, ನಮ್ಮ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಕಲಿಸುವ ಮೂಲಕ ಭಿನ್ನವಾದ ಶಿಕ್ಷಣ ಪದ್ಧತಿಯನ್ನು ಹೊಂದಿದೆ.ಮಾತೃದೇವೋಭವ, ಪಿತೃದೇವೋಭವ, ಅತಿಥಿದೇವೋಭವ ಹಾಗೂ ಗುರುದೇವೋಭವಎನ್ನುವ ನಾಲ್ಕು ನಿಯಮಗಳನ್ನು ಪಾಲಿಸುತ್ತಾ, ತಂದೆ–ತಾಯಿ ಪ್ರತ್ಯಕ್ಷದೇವರಿದ್ದಂತೆ, ಹಾಗಾಗಿ ದಿನನಿತ್ಯ ಶಾಲೆಗೆ ಬರುವ ಮುನ್ನತಂದೆತಾಯಿಗೆ ನಮಸ್ಕರಿಸಿ ಬರುವಂತೆ ಕಿವಿ ಮಾತು ಹೇಳಿದರು. ಹಾಗೆಯೇ ಮುಂದಿನ ವಿದ್ಯಾರ್ಥಿಜೀವನಉತ್ತಮವಾಗಿರಲಿ, ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಸೇರ್ಪಡೆಯಾದ ಪುಟಾಣಿಗಳಿಗೆ ಸಂಸ್ಥೆಯ ಹಿರಿಯರುತಿಲಕಧಾರಣೆ ಮಾಡಿ ಆಶೀರ್ವದಿಸಿದರು.
ನಂತರಅಧ್ಯಾಪಕ ವೃಂದದವರುಎಲ್ಲಾ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಅಕ್ಷತೆ ಹಾಕಿ, ಸಿಹಿ ನೀಡಿ ನೂತನ ಶೈಕ್ಷಣಿಕ ವರ್ಷಕ್ಕೆಆದರದಿಂದ ಬರಮಾಡಿಕೊಂಡರು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದರವಿರಾಜ್‌ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುವಿದ್ಯಾರ್ಥಿನಿಯಾದವೈಷ್ಣವಿ ಕಾಮತ್ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
