ಕೈಕಂಬ : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಾ. ಭರತ್ ಶೆಟ್ಟಿ ಅವರು ಮಂಗಳೂರಿನ ತಾಲೂಕು ಮಿನಿ ವಿಧಾನಸೌಧದಲ್ಲಿ ವ್ಯವಸ್ಥೆಗೊಳಿಸಲಾದ ಚುನಾವಣಾ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಯ ಜೊತೆಯಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಅಭೂತಪೂರ್ವ ಸಮಾವೇಶ :

ನಾಮಪತ್ರ ಸಲ್ಲಿಸುವುದಕ್ಕಿಂತ ಮುಂಚೆ ಕಾವೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಡಾ. ಭರತ್ ಶೆಟ್ಟಿ, ಅಲ್ಲಿಂದ ಕಾವೂರು ಜಂಕ್ಷನ್ವರೆಗೆ ಕೇಸರಿಮಯಗೊಂಡ ಕಾರ್ಯಕರ್ತರ ಭವ್ಯ ಮೆರವಣಿಯಲ್ಲಿ ರಾರಾಜಿಸಿದರು. ಶಾಸಕರು ಓಪನ್ ಜೀಪಿನಲ್ಲಿ ಜನಸ್ತೋಮಕ್ಕೆ ಕೈ¸ಬೀಸಿ ಅಭಿನಂದಿಸಿದರೆ, ನೂರಾರು ವಾಹನಗಳು ಮೆರವಣಿಯಲ್ಲಿ ಸಾಗಿ ಬಂದವು. ಕಾವೂರು ಮೈದಾನದಲ್ಲಿ ಕಾರ್ಯಕರ್ತರು ಹಾಗೂ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಸಮಾವೇಶದಲ್ಲಿ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಮೂವರು ಮಾಜಿ ಕಾರ್ಪೊರೇಟರ್ಗಳು ವಿದ್ಯುಕ್ತವಾಗಿ ಬಿಜೆಪಿ ಸೇರಿಕೊಂಡರು.
