ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ

ಉಳ್ಳಾಲ: ನಾಪತ್ತೆಯಾಗಿ ವಿವಾಹವಾಗಿರುವ ಕೋಟೆಕಾರು ಮೂಲದ ವಿದ್ಯಾರ್ಥಿನಿ   ಇನ್ಶಾ ಖಲೀಲ್ ಹಾಗೂ ಭರತ್ರಾಜ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರೇಮಿಗಳಿಗೆ ಸಹಕಾರ ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತರಿಬ್ಬರ ತಾಯಿ ಮತ್ತು ಅಜ್ಜಿಯನ್ನು ಬಂಧಿಸಿ ಠಾಣೆಯಲ್ಲಿ ಕೂಡಿಟ್ಟ ಘಟನೆ ವರದಿಯಾಗಿದೆ. ಪೊಲೀಸ್ ವಶದಲ್ಲಿರುವ ಅಮಾಯಕರನ್ನು ಬಿಡುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ಜನಪ್ರತಿನಿಧಿಗಳ ತಂಡ ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ಭಾನುವಾರ ಮನವಿ ಮಾಡಿದ್ದು, ಘಟನೆಗೆ ಸಂಬಂಧಿಸಿ ವಶದಲ್ಲಿದ್ದ ಮಹಿಳೆಯರನ್ನು ಪೊಲೀಸರು ಸಂಜೆಯ ವೇಳೆಗೆ ಹೇಳಿಕೆ ಪಡೆದುಕೊಂಡು ಬಿಟ್ಟಿದ್ದಾರೆ.

ullal (1)

ullal (2)

ullal (3)

ullal (4)

ullal (5)

ullal (6)

ullal (7)

ullal (8)

ullal (9)

ullal (10)

ullal (11)

ullal (12)

 

ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇನ್ಶಾ ಖಲೀಲ್ ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈಕೆಯನ್ನು ಖಾಸಗಿ ಬಸ್ ನಿವರ್ಾಹಕ ಭರತ್ರಾಜ್ ಅಪಹರಿಸಿದ್ದಾನೆಂದು ವಿದ್ಯಾರ್ಥಿನಿಯ ಹೆತ್ತವರು ದೂರು ನೀಡಿದ್ದರು. ದೂರಿನಲ್ಲಿ ಅತನಿಗೆ ಸಹಕರಿಸಿದ್ದರೆಂದು ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಲತಾ ಮತ್ತು ಅಕೆಯ ಪತಿ ಅನಂದ್ ಮತ್ತು ಭರತ್ರಾಜ್ ಸ್ನೇಹಿತರಾದ ಹಿಂದೂ ಸಂಘಟನೆಯ ಕಾರ್ಯಕತರಿಬ್ಬರ ವಿರುದ್ಧ ದೂರು ನೀಡಲಾಗಿತ್ತು. ದೂರಿನಂತೆ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಅಕೆಯ ಪತಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತ ರಾಹುಲ್ ಎಂಬಾತನ ತಾಯಿ ಮತ್ತು ಆಜ್ಜಿಯನ್ನು ಉಳ್ಳಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಹಿಂದೂ ಸಂಘಟನೆ ಕಾರ್ಯಕರ್ತರ ಮನೆಮಂದಿಯನ್ನು ವಶಕ್ಕೆ ತೆಗೆದುಕೊಂಡ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು ಉಳ್ಳಾಲ ಪೊಲೀಸ್ ಠಾಣೆಗೆ ಮಧ್ಯಾಹ್ನ ತೆರಳಿ ವಶಕ್ಕೆ ತೆಗೆದುಕೊಂಡವರನ್ನು ಬಿಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಹೊರಗಡೆ ಜಮಾಯಿಸಿದಾಗ ಸ್ವಲ್ಪ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು . ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಾತುಕತೆ ನಡೆಸಿದ್ದು, ಪೊಲೀಸರು ತಮ್ಮ ವಶದಲ್ಲಿದ್ದ ಮಹಿಳೆಯರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.

ಭರತ್ರಾಜ್ ಹಾಗೂ ಇನ್ಶಾ ಖಲೀಲ್ ಪರಾರಿಯಾಗಿ ಮದುವೆಯಾಗಲು ಸಹಕರಿಸಿದ್ದ ಯುವಕರ ಸಂಬಂಧಿಗಳನ್ನು, ಹೆತ್ತವರನ್ನು ವಶಕ್ಕೆ ತೆಗೆದುಕೊಮಡ ವಿಚಾರದಲ್ಲಿ ಸ್ಥಳೀಯರು ಮತ್ತು ಸಂಘಟನೆಯ ಕಾಯರಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಆರೋಪಿಯಾಗಿರುವ ರಾಹುಲ್ ಎಂಬಾತನ ತಾಯಿ ಮತ್ತು ಅಜ್ಜಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದು ತಪ್ಪು, ಅನಾರೋಗ್ಯದಲ್ಲಿರುವ ಇಬ್ಬರನ್ನು ಬಿಟ್ಟು ಬಿಡಬೇಕು ಎಂದು ಆಗ್ರಹಿಸಿದರು.

ಪೊಲೀಸರ ವಿರುದ್ಧ ಆಕ್ರೋಶ:
ಉಳ್ಳಾಲ ಪೊಲೀಸರು ಕಳೆದ ಕೆಲವು ದಿನಗಳ ಹಿಂದೆ ನಡೆದ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ವಾರ ಅಕ್ರಮ ಗೋಸಾಗಾಟ ಸೇರಿದಂತೆ ಅಕ್ರಮ ಕಸಾಯಿಖಾನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಆತನ ಮನೆಯ ಹೆಂಗಸರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿಲ್ಲ. ಹಿಂದೂಗಳ ಮೇಲೆ ಒಂದು ಕಾನೂನು, ಅಲ್ಪಸಂಖ್ಯಾತರ ಮೇಲೆ ಇನ್ನೊಂದು ಕಾನೂನು ಮಾಡುತ್ತಿರುವುದರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ನಾಯಕರೊಂದಿಗೆ ವಾಗ್ವಾದ:
ಘಟನೆಗೆ ಸಂಬಂಧಿಸಿದಂತೆ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿ ಹೊರಗೆ ಬಂದ ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಯ ಮುಖಂಡರು ಸಂಜೆಯ ವೇಳೆಗೆ ಮಹಿಳೆಯರನ್ನು ಪೊಲೀಸರು ಬಿಡುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮುಖಂಡರನ್ನು ತರಾಟೆಗೆ ತೆಗೆದುಕೊಂಡು ಸಂಜೆಯ ವೇಳೆಗೆ ಬೇಡ ಈಗಲೇ ಬಿಡಬೇಕು ಎಂದು ಆಗ್ರಹಿಸಿದ ಘಟನೆಯೂ ನಡೆದಿದೆ.

By suddi9

Leave a Reply

Your email address will not be published. Required fields are marked *