ಕೈಕಂಬ : ಗುರುಪುರ ದೋಣಿಂಜೆಗುತ್ತಿನ `ಧರ್ಮ ಚಾವಡಿ’ ನಿರ್ಮಾಣಕ್ಕೆ ಜ. ೨೬ರಂದು ಗುರುಪುರ ಮೂಳೂರು ವೈದ್ಯನಾಥ ದೈವಸ್ಥಾನದ ತಂತ್ರಿ ವಾಸುದೇವ ಭಟ್, ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುಮಾರ್ ರೈ ಹಾಗೂ ಮೂಳೂರಿನ ಎಲ್ಲ ಗುತ್ತು ಮನೆತನದ ಯಜಮಾನರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಕತಾರ್ ಉದ್ಯಮಿ ಹಾಗೂ ಧರ್ಮ ಚಾವಡಿ ಸಮಿತಿ ಅಧ್ಯಕ್ಷ ದೋಣಿಂಜೆಗುತ್ತು ರವಿ ಶೆಟ್ಟಿ ಮಾತನಾಡಿ, ಇಂತಹ ಪುಣ್ಯದ ಕೆಲಸಕ್ಕೆ ಸರ್ವರ ತನು-ಮನ-ಧನದ ಸಹಕಾರ ಅತ್ಯಗತ್ಯ. ಉತ್ತಮ ಕಾರ್ಯಕ್ಕೆ ಧನ ವಿನಿಯೋಗಿಸಿದರೆ ಜೀವನ ಸಾರ್ಥಕವಾಗುವುದು ಎಂದರು.ದೋಣಿಂಜೆಗುತ್ತಿನ ಗಡಿಕಾರ ಪ್ರಮೋದ್ ಕುಮಾರ್ ರೈ ಮಾತನಾಡಿ, ಮುಂದಿನ ೫ ತಿಂಗಳೊಳಗೆ ಧರ್ಮ ಚಾವಡಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಕುಟುಂಬಿಕರ ಪೂರ್ಣ ಸಹಕಾರ ಬೇಕಿದೆ ಎಂದರು.

ಗಡಿಕಾರ ಜಗದೀಶ ಶೆಟ್ಟಿ ಇರುವೈಲು ದೊಡ್ಡಮನೆಗುತ್ತು(ಇಂರ್ದಾಳ ಪಟ್ಟ), ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಸುದರ್ಶನ ಶೆಟ್ಟಿ ಪೆರ್ಮಂಕಿ, ಸತೀಶ್ ಕಾವ ಬೆಳ್ಳಿಬೆಟ್ಟುಗುತ್ತು, ಸುಕುಮಾರ್ ಶೆಟ್ಟಿ ದೋಣಿಂಜೆಗುತ್ತು, ಪುರಂದರ ಮಲ್ಲಿ ದೋಣಿಂಜೆಗುತ್ತು, ಧೂಮಾವತಿ ಪಾತ್ರಿ ತನಿಯಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಬ್ರಹ್ಮ ಬಲವಾಂಡಿ ದೈವದ ಜಳಕದ ಕೆರೆ ಜೀರ್ಣೋದ್ಧಾರಕ್ಕೆ ಸುಮುಹೂರ್ತ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗಡಿಕಾರ ಪ್ರತಾಪ್ ಶೆಟ್ಟಿ ಬೆರ್ನೊಟ್ಟು ಪೆರಾರ, ಗಡಿಕಾರ ಶಂಕರ್ ರೈ ಕುಳಾಯಿಗುತ್ತು, ಗಡಿಕಾರ ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟುಗುತ್ತು, ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಓಂ ಪ್ರಕಾಶ್ ಶೆಟ್ಟಿ, ಪ್ರಶಾಂತ ಕಾಜವ ದೋಣಿಂಜೆಗುತ್ತು, ಧರ್ಮ ಚಾವಡಿಯ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮಲ್ಲಿ ಹಾಗೂ ಪದ್ಮನಾಭ ಶೆಟ್ಟಿ, ವೈದ್ಯನಾಥ ಪಾತ್ರಿ ಚಂದ್ರಹಾಸ ಕೌಡೂರು, ಮೂಳೂರಿನ ೧೬ ಗುತ್ತು ಮನೆತನದವರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ದೋಣಿಂಜೆಗುತ್ತು ಸುಧಾಕರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *