ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಮತ್ತು ಬಂಟ್ವಾಳ ‌ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಶಾಸಕರು ಕೈಗೊಂಡಿರುವ , ಅಭಿವೃದ್ಧಿ ಯೋಜನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಬಂಟ್ವಾಳ ‌ಬಿಜೆಪಿ ಹಾಗೂ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ “ಗ್ರಾಮ ವಿಕಾಸ ಯಾತ್ರೆ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅತ್ಯಂತ ಯಶಸ್ವಿಯತ್ತ ಸಾಗುತ್ತಿದೆ ಎಂದು ಮಾಜಿ‌ ಶಾಸಕ ಎ.ರುಕ್ಮಯ ಪೂಜಾರಿ ಹೇಳಿದರು .


ಕಳೆದ ನಾಲ್ಕು ದಿನದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅವರು ಇಂದು ಜ.18 ರಂದು ಬುಧವಾರ ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಮೀನರಸಿಂಹ ದೇವಸ್ಥಾನದಿಂದ ಹೊರಟ 5 ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅತ್ಯಂತ ಯೋಚನಾಬಧ್ದವಾದ ಯಶಸ್ವಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಕಾರ್ಯಕರ್ತರ ಹಾಗೂ ಪ್ರತಿ ಗ್ರಾಮದ ಜನರ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಪ್ರತಿಯೊಬ್ಬರೂ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ ಬೆಳದು ನಿಂತಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಅವರು ಅತ್ಯಧಿಕ ಅಂತರದಲ್ಲಿ ಗೆಲುವ ಸಾಧಿಸಬೇಕು, ಅ ನಿಟ್ಟಿನಲ್ಲಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು.
ಮುಂಬರುವ ಪ್ರತಿದಿನವೂ ಚುನಾವಣಾ ಹೋರಾಟದ ದಿನ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

By suddi9

Leave a Reply

Your email address will not be published. Required fields are marked *