ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಪಿಲಿಂಗಾಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋ ದ್ಧಾರಗೊಳ್ಳುತ್ತಿರುವ ಶ್ರೀ ಗಾಯತ್ರಿದೇವಿ ದೇವಸ್ಥಾನಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಈಚೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಫೆ.8ರಿಂದ 10ರತನಕ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದರು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ, ಉಪಾಧ್ಯಕ್ಷರಾದ ಪ್ರಮೋದ್ ಕುಮಾರ್ ರೈ, ಸಂಜೀವ ಪೂಜಾರಿ ಪಿಲಿಂಗಾಲು, ಎಂ.ಬೂಬ ಸಪಲ್ಯ, ಮುಂಡಬೈಲು, ಕೆ.ಬಾಬು ಸಪಲ್ಯ ಕಾಡಬೆಟ್ಟು, ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಸಮಿತಿ ಪದಾಧಿಕರಿಗಳಾದ ಮಾಧವ ಎಸ್.ಮಾವೆ, ಮೋಹನ್ ಕೆ.ಶ್ರೀಯಾನ್ ರಾಯಿ, ವಸಂತ ಪಂಡಿತ್ ಗೋವಿಂದಬೆಟ್ಟ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಜಗದೀಶ ಕುಂದರ್, ಮೋಹನದಾಸ ಗಟ್ಟಿ, ಜಯರಾಮ ಕುಲಾಲ್ ಉರುಡಾಯಿ, ಪೂವಪ್ಪ ಮೆಂಡನ್, ಧರ್ಣಪ್ಪ ಕುಂಜರಬೆಟ್ಟು ಮತ್ತಿತರರು ಇದ್ದರು

By Suddi9

Leave a Reply

Your email address will not be published. Required fields are marked *