ಮೂಡುಬಿದರೆ: ಡಿ.ಸಿ.ಮನ್ನಾ ಜಮೀನಿನ ಸ್ವಾಭಿಮಾನ ಜನ ಜಾಗೃತಿ ರಥ ಯಾತ್ರೆಗೆ ಮೂಡುಬಿದರೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತ ಸಮಿತಿಯ ಸದಸ್ಯ ಮಹಾಬಲ ಎಂ. ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಜಾತಿಗಳವರಿಗೆ ಸ್ವಾತಂತ್ರ್ಯ ಪೂರ್ವ ಸಕರ್ಾರ ಮದ್ರಾಸ್ ಪ್ರಾಂತ್ಯದ ಬಿ.ಎಸ್.ಒ. ಚಾಪ್ಟರ್ 1 ರ 15-38 ರ ಮೇರೆಗೆ ಡಿಪ್ರೆಸ್ಸ್ಡ್ ಕ್ಲಾಸ್ ಎಂಬ ಹೆಸರಿನಲ್ಲಿ ಜಿಲ್ಲೆಯ ಪ್ರತೀ ತಾಲೂಕಿನ ಎಲ್ಲಾ ಗ್ರಾಮಗಳ ಸಕರ್ಾರಿ ಕಡತವಾದ ಅಡಾಂಗಲ್ಲುಗಳಲ್ಲಿ ಜಮೀನನ್ನು ಮಂಜೂರು ಮಾಡುವ ಬಗ್ಗೆ ಸವರ್ೆ ನಂಬರುಗಳಲ್ಲಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಜಮೀನು 164 ಜಾತಿಗಳ ಪರಿಶಿಷ್ಟರ ಸಮೂಹದ ಎಲ್ಲಾ ಉದ್ಧೇಶಗಳಿಗಾಗಿ ಮೀಸಲಿಟ್ಟ ಭೂಮಿಯಾಗಿದ್ದು ಪರಿಶಿಷ್ಟರ ಭೂ ಹಕ್ಕುಳ್ಳ ಜಮೀನು ಆಗಿದ್ದು ಈ ಜಮೀನನ್ನು ಪರಿಶಿಷ್ಟರಿಗೆ ಭೂ ಮಂಜೂರತಿ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ. ಹಾಗಾಗಿ, ಅತೀ ಹೆಚ್ಚಿನ ಪ್ರಮಾಣದ ಭೂಮಿ ಅರಣ್ಯ ಇಲಾಖೆ, ಗೇರು ಅಭಿವೃದ್ಧಿ ನಿಗಮ, ಸಕರ್ಾರಿ ಕಟ್ಟಡ, ಪರಿಶಿಷ್ಟರೇತರ ರ ಅಕ್ರಮ ಹಾಗೂ ಇತ್ಯಾದಿ ಕೃತ್ಯಾವಳಿಗಳಿಂದ ಈ ಭೂಮಿಯು ಉಪಯೋಗವಾಗುತ್ತಿದ್ದು, ನಿಜವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ಫಲಾನುಭವಿಗಳಿಗೆ ಮಂಜೂರು ಆಗುತ್ತಿಲ್ಲ.
ಹಾಗಾಗಿ ಈ ಜಮೀನಿಗೆ ಸಂಬಂಧಪಟ್ಟಂತೆ ಕನರ್ಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಡಿ.ಸಿ. ಮನ್ನಾ ಜಮೀನು ಮೀಸಲಾತಿ ಮತ್ತು ಜಮೀನು ಮಂಜೂರಾತಿ ಅಧಿನಿಯಮ 2014 ಜಾರಿಗೆ ಒತ್ತಾಯಿಸುವ ಸಲುವಾಗಿ ಪರಿಶಿಷ್ಟರ ಸ್ವಾಭಿಮಾನ ಜನ ಜಾಗೃತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದಶರ್ಿ ಪದ್ಮನಾಭ ಪಿ., ಕಾರ್ಯದಶರ್ಿ, ವಕೀಲ ನಾರಾಯಣ ಕಡಲಕೆರೆ, ಸದಸ್ಯ ನಿವೃತ್ತ ಶಿಕ್ಷಕಬಾಬು ಎಂ. ಉಪಸ್ಥಿತರಿದ್ದರು.
