ವಿಟ್ಲ: ರೋಟರಿ ಕ್ಲಬ್ ವಿಟ್ಲ ಹಾಗೂ ವಿಟ್ಠಲ್ ಸುಪ್ರಜಿತ್ ಐಟಿಐ ವತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು. ಈ ಶಿಬಿರವನ್ನು ನ್ಯಾಯಾವಾದಿ ನೋಟರಿ ಜಯರಾಮ ರೈ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ೩೦ ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ವಿಟ್ಠಲ ವಿದ್ಯಾ ಸಂಘದ ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ ಇವರನ್ನು ಗೌರವಿಸಲಾಯಿತು.

ವಿಟ್ಠಲ ಸುಪ್ರಜಿತ್ ಐಟಿಐ ಯ ಸಂಚಾಲಕ ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ರೇನಸ್, ಪ್ರಾಂಶುಪಾಲ ರಮೇಶ್ ರೈ, ವಿಟ್ಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್, ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವ್, ಅಣ್ಣಪ್ಪ ಸಾಸ್ತಾನ, ಅಲ್ಫಾನ್ಸೊ ವೇಗಸ್, ಮಾಧವ್ , ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *