ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆ ಮೋನಪ್ಪ ಗೌಡ ಶಿವಾಜಿನಗರ ಆಯ್ಕೆ
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ಶಾಂತಿನಗರ ವಿಟ್ಲ ಇದರ ೨೦೨೨-೨೩ ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ ಮೋನಪ್ಪ ಗೌಡ ಶಿವಾಜಿನಗರ ಇವರು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಮೋಹನ ಗೌಡ ಕಾಯರ್‌ಮಾರ್, ಉಪಾಧ್ಯಕ್ಷರುಗಳಾಗಿ ಕುಶಾಲಪ್ಪ ಗೌಡ ಇರಂದೂರು, ಬಾಲಕೃಷ್ಣ ಗೌಡ ಪೊನ್ನೆತ್ತಡಿ ಮತ್ತು ಧರ್ಣಮ್ಮ ಕನ್ಯಾನ ಕಾರ್ಯದರ್ಶಿ ವಿಶ್ವನಾಥ ಗೌಡ ವರಪ್ಪಾದೆ ಕೋಶಾಧಿಕಾರಿ ಕೆ ಈಶ್ವರ ಗೌಡ ಸತ್ಯದೀಪ ದರ್ಬೆ ಜತೆ ಕಾರ್ಯದರ್ಶಿಗಳಾಗಿ ರಮೇಶ ಗೌಡ ಕೆ ಮಠದಮೂಲೆ ಮತ್ತು ಕೆ ವಿಶ್ವನಾಥ ಗೌಡ ಕುಳಾಲು ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಿರಿನಿವಾಸ ಕಾನೂನು ಸಲಹೆಗಾರ ಮಹೇಶ್ ಅಳೀಕೆ ಗೌರವ ಸಲಹೆಗಾರರಾಗಿ ಲಿಂಗಪ್ಪ ಗೌಡ ಅಳಿಕೆ, ಪದ್ಮನಾಭ ಗೌಡ ಚಂದಪ್ಪಾಡಿ, ಗಿರಿಯಪ್ಪ ಗೌಡ ಗಿರಿನಿವಾಸ, ಬೆಳಿಯಪ್ಪ ಗೌಡ ದೇವರಮನೆ ಮತ್ತು ಪದ್ಮನಾಭ ಗೌಡ ಬಿ ಸಿ ರೋಡ್ ಹಾಗೂ ೨೫ ಜನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.