ವಿಟ್ಲ ಶೋಕಮಾತಾ ದೇವಾಲಯದ ಶತಮಾನೋತ್ಸವ
ವಿಟ್ಲ: ಶೋಕಮಾತಾ ದೇವಾಲಯದ ಶತಮಾನೋತ್ಸವ ಸಂದರ್ಭದಲ್ಲಿ ವಿಟ್ಲ ಚರ್ಚಿನ ಯುವಜನ ಆಯೊಗ ಹಾಗೂ
ಐಸಿವೈಯಂ ವಿಟ್ಲ ಘಟಕದ ವತಿಯಿಂದ ವಿಟ್ಲ ಚರ್ಚ್ ವ್ಯಾಪ್ತಿಯ ಯುವಜನರ ಸಹಮಿಲನ ಯುವ ಮಿಲನ್ 2022 ಕಾರ್ಯಕ್ರಮ
ಅ.02ರಂದು ಸಂತ ರೀಟಾ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟನೆ ಹಾಗೂ ಕಾರ್ಯಕ್ರಮದ ಅದ್ಯಕ್ಷರಾಗಿ ವಿಟ್ಲ ಚರ್ಚ್‌ನ ಗುರುಗಳಾದ ವಂ|| ಫಾ|| ಐವನ್ ಮೈಕಲ್ ರೊಡ್ರಿಗಸ್ ರವರು ಮಾತನಾಡಿ ”ಸೇವೆಯ ಮುಖಾಂತರ ನಾಯಕತ್ವ”ದ ಗುಣಗಳನ್ನು ಬೆಳೆಸಲು ಕರೆನೀಡಿದರು, ಹಾಗೂ ಯುವಜನರ ಭವಿಷ್ಯದ ಬಗ್ಗೆ
ಗಮನಕೋಡುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಂ|| ಫಾ|| ಸ್ಟೇನಿ ಪಿಂಟೊ ಮತ್ತು ರೋಶನ್ ಮಾಡ್ತಾರವರು ”ಯುವಜನರ ವಿಶ್ವಾಸ ಹಾಗೂ
ಭವಿಷ್ಯ”ದ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನದ ನಂತರ ಆಟೋಟ ಹಾಗೂ ಕೆಲವು ಗುಂಪು ಸ್ಪರ್ದೆಗಳ ಮುಖಾಂತರ ಇಡೀ
ದಿನವನ್ನು ಸ್ಮರಣೀಯ ದಿನವನ್ನಾಗಿ ಆಚರಿಸಲಾಯಿತು.
ವೇದಿಕೆಯಲ್ಲಿ ಯುವ ಆಯೋಗದ ಸಂಚಾಲಕರಾದ ತೋಮಸ್ ಮಸ್ಕರೇನಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ
ಮನೋಹರ್ ಲೇನ್ಸಿ ಡಿಸೊಜಾ, ಕಾರ್ಯದರ್ಶಿ ವಿಜಯ್ ಪಾಯ್ಸ್, 21 ಅಯೋಗದ ಸಂಚಾಲಕರಾದ ಲೂವಿಸ್ ಮಸ್ಕರೇನಸ್,
ಐಸಿವೈಯಂ ಕೇಂದ್ರೀಯ ಸಮಿತಿಯ ಅದ್ಯಕ್ಷರಾದ ಅನಿಲ್ ಜೋನ್ ಸಿಕ್ವೇರಾ, ವಿಟ್ಲ ವಲಯಾಧ್ಯಕ್ಷರಾದ ಅವಿಲ್ ರೊಡ್ರಿಗಸ್ ,
ಐಸಿವೈಯಂ ವಿಟ್ಲ ಘಟಕದ ಅಧ್ಯಕ್ಷರಾದ ಜೋಸ್ಟನ್ ಲೋಬೊ ಹಾಗೂ ಕಾರ್ಯದರ್ಶಿ ಪ್ರೀತೇಶ್ ಲೋಬೊರವರು ಹಾಜರಿದ್ದರು.
ಕ್ಯಾರಲ್ ಲೋಬೊ, ಜೇಸನ್ ಲೋಬೊ, ಜಾಸ್ಮಿನ್ ವೇಗಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.