ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಪಂಜಿಕಲ್ಲು ವಲಯದ ಅಂಗನವಾಡಿ ಪುಟಾಣಿಗಳ ಮಕ್ಕಳ ದಿನಾಚರಣೆ ಸಹಕಾರ ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಉದ್ಘಾಟಿಸಿದರು.
IMG_9640
ಬಳಿಕ ಮಾತನಾಡಿದ ಅವರು ಮಕ್ಕಳ ದಿನಾಚರಣೆಯನ್ನು ಇಲಾಖೆ ಸಾಮೂಹಿಕವಾಗಿ ಆಚರಣೆ ಮಾಡಿದಾಗ ಮಕ್ಕಳಲ್ಲಿ ಸಮಾನತೆಯ ಮನಸ್ಸು ಮೂಡಲು ಸಾಧ್ಯ ಎಂದರು. ದಿನಾಚರಣೆಯ ಜೊತೆಗೆ ಮಕ್ಕಳ ಕೌಶಲ್ಯವನ್ನು ಪ್ರದರ್ಶನಗೊಳಿಸಲು ಸ್ಪರ್ದೆಗಳನ್ನು       ಏರ್ಪಡಿಸಿದ್ದು ಶ್ಲಾಗನೀಯ ಎಂದರು.

ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ಇಕ್ಬಾಲ್, ಜಗದೀಶ ಕುಂದರ್, ತಾ.ಪಂ.ಸದಸ್ಯ ಎಂಪ್ರೆಮ್ ಸ್ವಿಕೇರ, ಸಹಾಯಕ ಸಿ.ಡಿ.ಪಿ.ಒ ಅನ್ನಪೂರ್ಣ, ಸಹಕಾರ ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇಲ್ಲಿನ ಪ್ರಮುಖರಾದ ನಾರಾಯಣ , ಡೊಂಬಯ್ಯ ಮತ್ತು ಮೇಲ್ವಿಚಾರಕಿ  ಕಂಬಳಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *