alvas nudisiri (1)

alvas nudisiri (2)

alvas nudisiri (3)

alvas nudisiri (4)

alvas nudisiri (5)

alvas nudisiri (6)

alvas nudisiri (7)

alvas nudisiri (8)

alvas nudisiri (9)

ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ಮೂರುದಿನಗಳ ಕಾಲ ನಡೆಯುವ “ಆಳ್ವಾಸ್ ನುಡಿಸಿರಿ-2014″ರಲ್ಲಿ 44 ಸಾಂಸ್ಕೃತಿಕ ಕಲಾ ತಂಡಗಳು ಸಹಿತ ಕಾಲೇಜಿನ ವಿವಿಧ ವಿಭಾಗದ ಘಟಕಗಳು, ಕಲಸ ಕನ್ನಿಕೆಯರು, ರೈತ ಸಂಘಟನೆ ಮತ್ತು ಗಣ್ಯರು ಭಾಗವಹಿಸುವ ಮೂಲಕ ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದವು.
ಪ್ರತಿ ವರ್ಷದಂತೆ ನುಡಿಸಿರಿ ಉದ್ಘಾಟನೆಗೂ ಮೊದಲು ವಿವಿಧ ಕಲಾ ತಂಡಗಳು ಮೆರವಣಿಗೆಯ ಮೂಲಕ ಗಣ್ಯರನ್ನು ನುಡಿಸಿರಿ ವೇದಿಕೆಗೆ ಕರೆ ತರುವುದು ವಾಡಿಕೆಯಾಗಿದ್ದು ಕಳೆದ ಬಾರಿ ನಡೆದ ವಿಶ್ವ ನುಡಿಸಿರಿಯಲ್ಲಿ ಮೂಡುಬಿದಿರೆಯ ಪೇಟೆಯಿಂದ ಮೆರವಣಿಗೆ ಆರಂಭಗೊಂಡಿದ್ದರೆ ಈ ಬಾರಿ ವಿದ್ಯಾಗಿರಿಯ ಕ್ಯಾಂಪಸ್ನಿಂದಲೇ ಮೆರವಣಿಗೆ ಆರಂಭಗೊಂಡಿದೆ.

ಈ ಬಾರಿಯ ಮೆರವಣಿಗೆಯಲ್ಲಿ ಮೊದಲ ಸ್ಥಾನವನ್ನು ತಟ್ಟಿರಾಯ ಅಲಂಕರಿಸಿದದ್ದು ಅದರ ನಂತರದ ಸಾಲಿನಲ್ಲಿ ಪೂಂಜಾಲಕಟ್ಟೆಯ ಶ್ರೀನಿವಾಸ ಮತ್ತು ತಂಡದಿಂದ ಶಂಖ, ಮೂಡುಬಿದಿರೆಯ ಹರೀಶ್ ತಂಡದ ಕೊಂಬು, 20 ಕೊಡೆಗಳು, ಕಲ್ಲಡ್ಕದ ರಮೇಶ್ ತಂಡದಿಂದ ಗೊಂಬೆ ಮತ್ತು ಕೀಲು ಕುದುರೆ, ಆಟಿ ಕಡೆಂಜ, ಆಳ್ವಾಸ್ ವಿದ್ಯಾಥರ್ಿಗಳಿಂದ ಯಕ್ಷಗಾನದ ವೇಷಗಳು, ಮೈಸೂರಿನ ಮಂಜು ತಂಡದಿಂದ ನಗಾರಿ, ಮೈಸೂರು ತಂಡದಿಂದ ಸೋಮನ ಕುಣಿತ, ಕೇರಳದ ದೇವರ ವೇಷ, ಶ್ರೀಲಂಕಾದ ನೃತ್ಯ ಕಲಾವಿದರು, ಮಣಿಪುರದ ನೃತ್ಯ ತಂಡ, ಕರುಣಾಕರ ಗುತ್ತಿಕಾರ್ ತಂಡದಿಂದ 22 ಜನರಿಂದ ಸಿದ್ಧ ವೇಷ, ಆಟಿ ಕಡೆಂಜ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾಥರ್ಿಗಳಿಂದ ಡೊಳ್ಳು ಕುಣಿತ, ಹಾಡುಗಾರರು, ಗದಗದ ವೀರಣ್ಣ ಅಂಗಡಿ ತಂಡದಿಂದ ಗೀಗೀ ಪದ, ಲಾವಣಿ, ತ್ರಿವರ್ಣ ಧ್ವಜದ ಮೆರಗು.

ಮಿಜಾರಿನ ಪ್ರಸಾದ್ ತಂಡದಿಂದ ತುಳು ನಾಡಿನ ವಾದ್ಯಗಳು, ಕನ್ನಡದ ಬಾವುಟ, ಕುಂದಾಪುರದ ಕೊರಗರ ಡೋಲು, ಮಂಡ್ಯದ ದೇವರಾಜ್ ತಂಡದಿಂದ ಪೂಜಾ ಕುಣಿತ, ಮೂಡಲಪಾಯ, ಹಗಲು ವೇಷ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾಥರ್ಿಗಳಿಂದ ಕೇರಳ ಚೆಂಡೆ, ಮಂಡ್ಯ ತಂಡದಿಂದ ವೀರಭದ್ರ ಕುಣಿತ, ಹಾವೇರಿ ಜಿಲ್ಲೆಯ ಪುರವಂತಿಕೆ, ಕನ್ಯಾಪುವಿನ ಸೋಣದ ಜೋಗಿ, ಕರಂಗೋಲು ಪಿಲಿಪಂಜಿ ಕುಣಿತ, ದುಡಿ ಕುಣಿತ, ಪುರುಷ ವೇಷ, ಇರೆ ನಲಿಕೆ, ಮಾರಿ ಭೂತ, ಕನ್ನಿ ಕಳೆಂಜ, ನರ್ಸಣ್ಣ, ರಂಗ ಭೂಮಿ ಪಾತ್ರಗಳು, ಹಾವೇರಿ ಜಿಲ್ಲೆಯ ಬೇಡರ ಕುಣಿತ, ಕೊಂಚಾಡಿಯ ಶ್ರೀ ಮೂಕಾಂಬಿಕಾ ಚೆಂಡೆ ಬಳಗದಿಂದ ಮಂಗಳೂರು ಚೆಂಡೆ, ಶಿವಮೊಗ್ಗದ ಬೂದಿಯಪ್ಪ ತಂಡದಿಂದ ಡೊಳ್ಳು ಕುಣಿತ ಅಲ್ಲದೆ ಎನ್.ಸಿ.ಸಿ.ಸೇವಾದಳ, ಸ್ಕೌಟ್ &ಗೈಡ್ಸ್, ಮಂಗಳುರಿನ ಕೆ.ಎಸ್.ಆರ್.ಪಿ ತಂಡದಿಂದ ಪೊಲೀಸ್ ಬ್ಯಾಂಡ್ ಸೆಟ್, ಹೊನ್ನಾವರದ ಜೇಮ್ಸ್ ತಂಡದ ಹೊನ್ನಾವರ ಬ್ಯಾಂಡ್ ಸೆಟ್, ರೇಂಜರ್ಸ್ ಮತ್ತು ರೋವರ್ಸ್, ಮೂಡುಬಿದಿರೆಯ ರೈತ ಸಂಘ, ವಿವಿಧ ಘಟಕಗಳು, ಪೂರ್ಣ ಕುಂಭ, ಸ್ಯಾಕ್ಸೊಫೋನ್ನೊಂದಿಗೆ ಗಣ್ಯರು ಮೆರವಣಿಗೆಯೊಂದಿಗೆ ಸಾಗುವ ಮೂಲಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು.
ಗಮನ ಸೆಳೆಯಿತು ಇರೆ ನಲಿಕೆ, ಮಾರಿ ಭೂತ : ಈವರೆಗೆ ನಡೆದ 10 ವರ್ಷದ ನುಡಿಸಿರಿ ಮೆರವಣಿಗೆಯಲ್ಲಿ ಇಲ್ಲದ ಇರೆ ನಲಿಕೆ ಮತ್ತು ಮಾರಿ ಭೂತ 11 ವರ್ಷದ ಮೆರವಣಿಗೆಗೆ ಹೆಚ್ಚಿನ ಆಕರ್ಷಣೆಯಾಗಿತ್ತು.
ಎಷ್ಟೋ ವರ್ಷಗಳ ಹಿಂದೆ ಇದ್ದು ಅದರ ನಂತರ ಅಳಿದು ಹೋಗುತ್ತಿರುವ ಜನಪದ ಮತ್ತು ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಇಂದಿನ ಯುವ ಜನಾಂಗಕ್ಕೆ ಆ ಕಲೆಗಳನ್ನು ಪರಿಚಯಿಸಬೇಕೆನ್ನುವ ನಿಟ್ಟಿನಲ್ಲಿ ರಾಷ್ಟ್ರ, ರಾಜ್ಯದ ಮತ್ತು ಜಿಲ್ಲೆಯ ಎಲ್ಲಿಲ್ಲಿಯೋ ಮೂಲೆಯಲ್ಲಿರುವ ಜನಪದ ಕಲೆಗಳನ್ನು ಹೆಕ್ಕಿ ತಂದು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಸಂಸ್ಥೆಯ ವಿದ್ಯಾಥರ್ಿಗಳಿಗಲ್ಲದೆ ಮೂಡುಬಿದಿರೆಯ ಜನತೆಗೂ ಪರಿಚಯಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ ಅದರಂತೆ ಈ ಬಾರಿಯ ನುಡಿಸಿರಿಯಲ್ಲಿ ಇರೆ ನಲಿಕೆ ಮತ್ತು ಮಾರಿ ಭೂತವನ್ನು ಪರಿಚಯಿಸುವ ಮೂಲಕ ಆಳ್ವರೇ ಹೀಗೆ ಎಂಬಂತೆ ಮಾಡಿದ್ದಾರೆ.

 

By suddi9

Leave a Reply

Your email address will not be published. Required fields are marked *