ಸುದ್ದಿ9ಬಂಟ್ವಾಳ : ದೇವಸ್ಥಾನ ಸೇವಾ ಕೇಂದ್ರವಾಗಿ ಕೆಲಸ ಮಾಡಬೇಕು , ಧರ್ಮವನ್ನು ಕಾಪಾಡಿಕೊಂಡರೆ ಧರ್ಮ ನಮ್ಮನ್ನು ಎಂದೆಂದೂ ರಕ್ಷಿಸುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ನುಡಿದರು . ಅವರು ನವೆಂಬರ್ 8ರಂದು ಇರಾ ಗ್ರಾಮ ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆದ ಅಖಂಡ ಭಜನಾ ಸಪ್ತಾಹದ 5ನೇ ದಿನದ ಧಾಮರ್ಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು . ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ , ನ್ಯಾಯವಾದಿಗಳಾದ ಸುರೇಶ್ ಕುಮಾರ್ ನಾವೂರ್ , ಶಿವಪ್ರಕಾಶ್ ಜೈನ್ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ , ಆಡಳಿತ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಉಪಸ್ಥಿತರಿದ್ದರು . ಅಖಂಡ ಭಜನಾ ಸಪ್ತಾಹ ಸಮಿತಿ ಅಧ್ಯಕ್ಷ ವಿಠಲ ಪ್ರಭು ಪತ್ತುಮುಡಿ ಪ್ರಸ್ತಾವನೆಗೈದರು . ರವಿರಾಜ್ ಕುಕ್ಕಾಜೆ ಸ್ವಾಗತಿಸಿದರು . ಪ್ರತುಲ್ ಕುಮಾರ್ ವಂದಿಸಿ, ಸುಪ್ರಿಯಾ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು .

 

007p

By Suddi9

Leave a Reply

Your email address will not be published. Required fields are marked *