ಸುದ್ದಿ9ಬಂಟ್ವಾಳ : ಕಣ್ಣು ಕಾಣದವರ ಪರಿಸ್ಥಿತಿಯನ್ನು ನೀವು ಅನುಭವಿಸಬೇಕಾದರೆ ನೀವು ನಿಮ್ಮ ಕಣ್ಣನ್ನು ಮುಚ್ಚಿಕೊಂಡರೆ ಸಾಕು , ಅನುಭವಕ್ಕೆ ಬರುತ್ತದೆ . ಮುಂದಿನ ದಿನಗಳಲ್ಲಿ ಕಿವಿಯ ಸಮಸ್ಯೆ ಬಗ್ಗೆ ಕೂಡ ಒಂದು ಶಿಬಿರವನ್ನು ಏಪರ್ಾಡು ಮಾಡಲಾಗಿದೆ , ತಾವು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು , ತಾವೆಲ್ಲರೂ ಊಟ ಕಡಿಮೆ ಕೆಲಸ ಸ್ವಲ್ಪ ಹೆಚ್ಚು ಮಾಡಿ ದಿನಕ್ಕೆ ಒಂದು ಗಂಟೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ನುಡಿದರು . ಅವರು ಯು.ಡಿ.ಫರೀದ್ ಫೌಂಡೇಶನ್ , ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ , ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ , ಇಮಾ ವಳವೂರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು-ಉಡುಪಿ ಇದರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಮತ್ತು ಕನ್ನಡಕ ವಿತರಣಾ ಸಮಾರಂಭವನ್ನು ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ವಳವೂರಿನಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು .
ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಧಾನ ಅಂಗ . ಮಕ್ಕಳಿಗೆ ನಾಲ್ಕು ವರ್ಷದ ನಂತರ ಕಣ್ಣು ಪರೀಕ್ಷೆ ಅಗತ್ಯವಾಗಿ ಮಾಡಿಸಬೇಕು . ಕಣ್ಣಿನ ಸಮಸ್ಯೆ ಕಾಣಿಸುದಕ್ಕಿಂತ ಮೊದಲೇ ಎಚ್ಚರಗೊಳ್ಳಬೇಕು ಎಂದು ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು . ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಉಮರ್ ಕರೀಂ, ಜಯರಾಮ ಸಾಮಾನಿ ತುಂಬೆ , ಎಸ್.ಉಮ್ಮರ್ ಹಾಜಿ ವಳವೂರ್ , ರಾಜಾರಾಮ್ ಶೆಟ್ಟಿ ಪೆರ್ಲಬೈಲು , ಗೋಪಾಲ್ಕೃಷ್ಣ ತುಂಬೆ , ಕೆ.ಪಿಸಿ.ಸಿ.ರಾಜ್ಯ ಕಾಮರ್ಿಕ ಘಟಕ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ಡಾ. ಸಹನಾ (ಪ್ರಸಾದ್ ನೇತ್ರಾಲಯ) ಭೂ ಬ್ಯಾಂಕ್ ನಾಮನಿದರ್ೇಶಕ ಸದಸ್ಯ ಪ್ರಕಾಶ್ ಬಿ.ಶೆಟ್ಟಿ , ಮೋನಪ್ಪ ಮಜಿ ವಲಯ ಕಾಂಗ್ರೇಸ್ ಅಧ್ಯಕ್ಷ ತುಂಬೆ , ಗ್ರಾ.ಪಂ.ಸದಸ್ಯರಾದ ದಿನೇಶ್ ರೈ, ಕಮಲಾ ಉಮಾನಾಥ , ಇವಾ ವಳವೂರಿನ ಅಧ್ಯಕ್ಷ ಮಹಮ್ಮದ್ ಅನೀಶ್ ಉಪಸ್ಥಿತರಿದ್ದರು. ನಿಸಾರ್ ಅಹ್ಮದ್ ತುಂಬೆ ಸ್ವಾಗತಿಸಿದರು . ಶಿಕ್ಷಕ ಬಿ.ಎಂ ತುಂಬೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು .

006p

By Suddi9

Leave a Reply

Your email address will not be published. Required fields are marked *