ವಿಟ್ಲ: ಮುಖ್ಯ ಗುರುಗಳಾಗಿ ಭಡ್ತಿಹೊಂದಿದ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5 ಶಿಕ್ಷಕರ ಬೀಳ್ಕೊಡುಗೆ ಸಮಾರಂಭವು ಜೂ.18ರಂದು ಶನಿವಾರ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಗೌರವಾಧ್ಯಕ್ಷರಾದ ಶ್ರೀ ಸುಬ್ರಾಯ ಪೈಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಮೇಶ್ ಆಳ್ವ , ಶ್ರೀಮತಿ ಶಾರದ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿಹೊಂದಿದ ದೇವಕಿ ಅಮ್ಮ, ಜಯಂತಿ ಕೆ, ಬಾಬು ನಾಯ್ಕ ಕೆ, ಸಂತೋಷ್ ಎಸ್, ಗೀತಾ ಎಸ್ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಎಸ್.ಎಸ್.ಎಲ್ ಸಿ ಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪ್ರತೀಕ್ಷಾ, ಲಾವಣ್ಯ , ಜ್ಞಾನವಿ, ಯಕ್ಷಿತಾ , ಆಯಿಷತ್ ಸಾನಿಫ,ಅಹಮ್ಮದ್ ಮಿಸ್ ಬಾಹ್, ಶಿಫಾನ, ಗೀತಾಂಜಲಿ, ಇವರನ್ನು ಸನ್ಮಾನಿಸಲಾಯಿತು.ಶ್ರೀಮತಿ ಪ್ರೇಮಲತಾ ಪಿ ಇವರು ಸ್ವಾಗತಿಸಿದರು. ಭವಿತಾ ಕೆ ಎ ವಂದಿಸಿದರು. ಅರುಣ ವಿ, ಹಾಗೂ ವಿನೋದ ಕಾರ್ಯಕ್ರಮ ನಿರೂಪಿಸಿದರು.
