ನವದೆಹಲಿ: ಅಗ್ನಿಪಥ್ ಯೋಜನೆಯನ್ನು ಯುವಕರು ತಿರಸ್ಕರಿಸುತ್ತಿರುವ ಕುರಿತಾಗಿ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಲೆಳೆದರು.

ಟ್ವೀಟ್‍ನಲ್ಲಿ ಏನಿದೆ?: ಕೇಂದ್ರದ ಯೋಜನೆಗಳನ್ನು ದೇಶದ ಜನ ಸ್ವೀಕಾರ ಮಾಡುತ್ತಿಲ್ಲ. ಅಗ್ನಿಪಥ್ ಯೋಜನೆ ಯುವಕರಿಂದ ತಿರಸ್ಕರಿಸಲಾಗಿದೆ. ಕೃಷಿ ಕಾನೂನು – ರೈತರಿಂದ ತಿರಸ್ಕರಿಸಲಾಗಿದೆ. ನೋಟು ಅಮಾನ್ಯೀಕರಣವನ್ನು ಅರ್ಥಶಾಸ್ತ್ರಜ್ಞರು ನಿರಾಕರಿಸಿದ್ದಾರೆ. ಜಿಎಸ್‍ಟಿ – ವ್ಯಾಪಾರಿಗಳಿಂದ ತಿರಸ್ಕರಿಸಲಾಗಿದೆ. ದೇಶದ ಜನತೆಗೆ ಏನು ಬೇಕು ಎಂಬುದು ಪ್ರಧಾನಿಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಅವರ ಸ್ನೇಹಿತರ ದನಿ ಬಿಟ್ಟು ಬೇರೇನೂ ಕೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.

ಗುರುವಾರ ಅಗ್ನಿಪಥ್ ವಿರೋಧಿಸಿ ಬಿಹಾರ, ಉತ್ತರಪ್ರದೇಶ ರಾಜ್ಯಗಳಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಿದೆ. ಹಾಗಾಗಿ ಪೂರ್ವ ಮಧ್ಯ ರೈಲ್ವೆಯ 22 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.

ದೇಶದಲ್ಲಿರುವ ಯುವಕರಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ `ಅಗ್ನಿಪಥ್’ ಅಲ್ಪಾವಧಿಯ ನೇಮಕಾತಿ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಗುರುವಾರ ಬಿಹಾರದಲ್ಲಿ ನಡೆಯುತ್ತಿರುವ ಸೇನಾಕಾಂಕ್ಷಿಗಳ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರವು ಅಗ್ನಿಪಥ್ ನೇಮಕಾತಿಯ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದೆ.

By Suddi9

Leave a Reply

Your email address will not be published. Required fields are marked *