ಬಾಗಲಕೋಟೆ: ಪತಿಯೊಬ್ಬ ಪತ್ನಿಯ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ಸಾವಿತ್ರಿ ವಡ್ಡರ್(32) ಕೊಲೆಯಾದ ದುರ್ದೈವಿ. ಹೂವಿನಹಳ್ಳಿ ಗ್ರಾಮದ ನಿವಾಸಿ ಮುತ್ತಪ್ಪ ವಡ್ಡರ್ ತನ್ನ ಪತ್ನಿ ಸಾವಿತ್ರಿ ವಡ್ಡರ್‌ಗೆ  ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಜಗಳ ಪ್ರಾರಂಭಿಸಿದ್ದಾನೆ. ಇದು ಅತಿರೇಕಕ್ಕೆ ಹೋಗಿ ಮುತ್ತಪ್ಪ, ಸಾವಿತ್ರಿ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಮೀನಗಢ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ನಿನ್ನೆ(ಬುಧವಾರ) ರಾತ್ರಿ ನಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *