ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಏಕಾಹ ಭಜನೋತ್ಸವ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಪ್ರತಿ ವರ್ಷ ನಡೆಯುವಂತೆ ಅಪ್ಪದ ಪೂಜೆಯ ಪ್ರಯುಕ್ತ ಏಕಾಹ ಭಜನೋತ್ಸವಕ್ಕೆ ನ.7ರಂದು ಬೆಳಗ್ಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕರಾದ ರಾಮ್ ಭಟ್ ಚಾಲನೆ ನೀಡಿದರು.
ದೇವಳದ ಪ್ರಧಾನ ಅರ್ಚಕ ಪವಿತ್ರಪಾಣಿ ಮೊಕ್ತೇಸರ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಮೊಕ್ತೆಸರರಾದ ಯು ತಾರನಾಥ ಆಳ್ವ, ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ , ವೆಂಕಟೇಶ್ ನಾವಡ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು. ಪೊಳಲಿ ರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನೆ ಪ್ರಾರಂಭಗೊಂಡಿತು
ನ.7ರಂದು ಶುಕ್ರವಾರ ಬೆಳಗ್ಗೆ ಪ್ರಾರಂಭಗೊಂಡ ಭಜನೋತ್ಸವವು ನ.8 ರಂದು ಶನಿವಾರ ಬೆಳಗ್ಗೆ ಮಂಗಲೋತ್ಸವ ನಡೆಯಲಿದೆ.










