ಬಂಟ್ವಾಳ : ತಾಲೂಕು ಕೊಯಿಲ ಅಣ್ಣಳಿಕೆ ಶ್ರೀ ಮಹಾಗಣಪತಿ ಸೌಧದ ಮೇಲಂತಸ್ತಿನಲ್ಲಿ ನಿಮರ್ಿಸಲಾದ ಶ್ರೀ ವಿಘ್ನೇಶ್ವರ ಸಭಾಭವನದ ಉದ್ಘಾಟನಾ ಕಾರ್ಯಕ್ರಮ ನ.9ರಂದು ರವಿವಾರ ಬೆಳಗ್ಗೆ ಗಂಟೆ 11.47ಕ್ಕೆ ಜರಗಲಿದೆ.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಭಟ್ ಮಾದೇರಿ ಅವರು ಸಭಾಭವನ ಉದ್ಘಾಟಿಸಲಿರುವರು. ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರ ಪದ್ಮರಾಜ್ ಬಲ್ಲಾಳ್, ರಾಯಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ, ತಾ.ಪಂ.ಸದಸ್ಯ ವಸಂತಕುಮಾರ್ ಅಣ್ಣಳಿಕೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಕರಿಯ ಪೂಜಾರಿ ಅಣ್ಣಳಿಕೆ ಅವರನ್ನು ಸಮ್ಮಾನಿಸಲಾಗುವುದು. ಮಧ್ಯಾಹ್ನ ಭೋಜನ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಕನಕಾಮೃಗ ನಡೆಯಲಿದೆ ಎಂದು ಸಭಾಭವನದ ಮಾಲಕ ರಾಮಚಂದ್ರ ಶೆಟ್ಟಿಗಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *