ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಜೂ.05ರಂದು ಭಾನುವಾರ ನಡೆದ ಭಕ್ತರ ಸಮಾಲೋಚನಾ ಸಭೆಯಲ್ಲಿ ನೀಲೇಶ್ವರ ಪದ್ಮನಾಭ ತಂತ್ರಿ ಮಾತನಾಡಿದರು.7btl-Chandika

ಬಿ.ಸಿ.ರೋಡು ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಭಕ್ತರ ಸಮಾಲೋಚನಾ ಸಭೆಯಲ್ಲಿ ನೀಲೇಶ್ವರ ಪದ್ಮನಾಭ ತಂತ್ರಿ ಮಾಹಿತಿ ನೀಡಿದರು.

ಶ್ರೀ ಚಂಡಿಕಾ ಪರಮೇಶ್ವರಿ ದೇವರು ದೈಹಿಕ ಮತ್ತು ಮಾನಸಿಕ ಕ್ಷೇಶ ನಿವಾರಿಸುವ ಶಕ್ತಿ ನೀಡುತ್ತಾರೆ ಎಂದರು. ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಮುಖರಾದ ಐತಪ್ಪ ಆಳ್ವ, ಇಂದಿರೇಶ್ ಶುಭ ಹಾರೈಸಿದರು. ಪ್ರಮುಖರಾದ ರವಿಶಂಕರ ಶೆಟ್ಟಿ ಬಡಾಜೆಗುತ್ತು, ರಾಕೇಶ್ ಮಲ್ಲಿ, ಅಶ್ವನಿ ಕುಮಾರ್ ರೈ, ವಿಶ್ವನಾಥ ಪೂಜಾರಿ, ಸದಾನಂದ ಶೆಟ್ಟಿ ರಂಗೋಲಿ, ಬಿ.ಸಂಜೀವ ಪೂಜಾರಿ, ಮನೋಹರ ಶೆಟ್ಟಿ, ಹರೀಶ ಪೂಂಜರಕೋಡಿ, ಸತೀಶ್ ಭಂಡಾರಿ, ರಾಜೇಶ್ ಎಲ್. ನಾಯಕ್, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಇದ್ದರು.

ಇದೇ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ, ಉಪಾಧ್ಯಕ್ಷರಾಗಿ ರಂಗೋಲಿ ಸದಾನಂದ ಶೆಟ್ಟಿ, ಕಾರ್ಯದರ್ಶಿಯಾಗಿ ಬಿ. ರಾಮಚಂದ್ರ ರಾವ್, ಜತೆ ಕಾವ್ಯದರ್ಶಿಯಾಗಿ ಶಂಕರ ಶೆಟ್ಟಿ, ಕೋಶಾಧಿಕಾರಿಯಾಗಿ ಸಂಕಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ, ಅಶ್ವನಿ ಕುಮಾರ್ ರೈ, ಪ್ರದೀಪ್ ರಾವ್ ಬಂಟ್ವಾಳ, ಚರಣ್ ಜುಮಾದಿಗುಡ್ಡೆ, ಪ್ರಮೋದ್ ಅಜ್ಜಿಬೆಟ್ಟು, ಜತೆ ಕಾರ್ಯದರ್ಶಿಯಾಗಿ ಐತಪ್ಪ ಪೂಜಾರಿ, ಮಂಜು ವಿಟ್ಲ ಆಯ್ಕೆಗೊಂಡರು.

By suddi9

Leave a Reply

Your email address will not be published. Required fields are marked *