ಬಿ.ಸಿ.ರೋಡ್: ರಬ್ಬರ್ ಮತ್ತು ಜೇನು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಎ.ಸತೀಶ್ಚಂದ್ರ ಅಧ್ಯಕ್ಷರಾಗಿ ಪುನರಾಯ್ಕೆ
ಬಂಟ್ವಾಳ: ತಾಲ್ಲೂಕಿನ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಜೂ.07ರಂದು ಮಂಗಳವಾರ ನಡೆದ ನೂತನ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಪಿ.ಎಸ್.ಮೋಹನ್ ಇವರನ್ನು ಅಭಿನಂದಿಸಲಾಯಿತು.
ಇಲ್ಲಿನ ಬಿ.ಸಿ.ರೋಡ್ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎ.ಸತೀಶ್ಚಂದ್ರ ಹೊಸಮನೆ ಇವರು ಮಂಗಳವಾರ ಐದನೇ ಬಾರಿ ಅವಿರೋಧವಾಗಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮೋಹನ್ ಪಿ.ಎಸ್. ಬಾಳ್ತಿಲ ಅವಿರೋಧ ಆಯ್ಕೆಗೊಂಡರು.
ನಿರ್ದೇಶಕರಾದ ಈಶ್ವರ ಭಟ್ ಬೋಳಂತೂರು, ವಸಂತ ಮಿತ್ತೊಟ್ಟು, ಎಂ.ಆರ್.ಅರವಿಂದ ಭಟ್ ಮಡವು, ರಾಮಚಂದ್ರ ಪೂಜಾರಿ ಕಂರ್ಬಡ್ಕ, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಓಲ್ವಿನ್ ಮೋನಿಸ್ ನಾವೂರು, ರಾಜೇಂದ್ರ ಹಾರ್ದೊಟ್ಟು, ಜಾನ್ ಸೇರಾ ದೆತ್ತಿಮಾರ್, ರಾಜಶೇಖರ ಶೆಟ್ಟಿ ಮಡಂತ್ಯಾರು, ಕಾಂಚಲಾಕ್ಷಿ ಮಣಿನಾಲ್ಕೂರು, ಜಯಶ್ರೀ ಉಪ್ಪಿನಂಗಡಿ, ಜಾಜಿಕ ಶೆಟ್ಟಿ ಕುಕ್ಕಳ, ಚುನಾವಣಾಧಿಕಾರಿ ಎನ್.ಜೆ.ಗೋಪಾಲ್, ಸಂಘದ ಸಿಇಒ ಗುಣಶೇಖರ ಕೊಡಂಗೆ ಇದ್ದರು.