ಆಳ್ವಾಸ್ ದೀಪಾವಳಿ 2014
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ವಿವಿಧ ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳಕಿನ ಹಬ್ಬ `ಆಳ್ವಾಸ್ ದೀಪಾವಳಿ’ಯು ವಿಜೃಂಭಣೆಯಿಂದ ಆಚರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿಗಳಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ವಿವೇಕ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಧಾಮರ್ಿಕ ಕಾರ್ಯಕ್ರಮಗಳು ದೀಪಾವಳಿ ಸಂದರ್ಭದಲ್ಲಿ ಆಚರಿಸುವ ತುಳಸಿ ಪೂಜೆ,ಗೋಪೂಜೆ, ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ಸಹಿತ ರೈತರ ಸಲಕರಣೆಗಳಿಗೆ ಪೂಜೆಯನ್ನು ನೆರವೇರಿಸಲಾಯಿತು.
ಭರತನಾಟ್ಯ- ಶಂಭೋ, ಕಥಕ್-ಕಲಾವತಿ ತರಾನ, ಬಂಜಾರ ನೃತ್ಯ, ಮಹಾರಾಷ್ಟ್ರ ಲಾವಣಿ ನೃತ್ಯ, ಪಂಜಾಬ್ ಬಾಂಗ್ಡಾ ನೃತ್ಯ, ಪಶ್ಚಿಮ ಬಂಗಾಳ ಪುರುಲಿಯಾ ಸಿಂಹ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾ ಕ್ಯಾಂಡಿಯಾನ್ ಡ್ಯಾನ್ಸ್, ಬಡಗುತಿಟ್ಟು ಯಕ್ಷಗಾನ ರೂಪಕ -ವಸಂತೋತ್ಸವ, ತೆಂಕುತಿಟ್ಟು ಯಕ್ಷಗಾನ-ಭ್ರಾಮರಿ ವಿಲಾಸ, ಡೊಳ್ಳು ಕುಣಿತ, ಕೇರಳ ಚೆಂಡೆ ವಾದನ, ಹುಲಿ ವೇಷ (ಕರಡಿ, ಶಾದರ್ೂಲ), ಕಂಗೀಲು ನೃತ್ಯ, ಕಲ್ಲಡ್ಕದ ಕೀಲು ಗೊಂಬೆ ಹಾಗೂ ನೃತ್ಯಗಳು, ತಾಲೀಮು ಹಾಗ ಪೂಜಾ ಕುಣಿತಗಳು ದೀಪಾವಳಿಯ ಕಳೆಯನ್ನು ಹೆಚ್ಚಿಸಿದವು. 533 ಕಲಾವಿದರು, 17 ಕಲಾಪ್ರಕರಾಗಳನ್ನು ಸುಮಾರು 5 ಗಂಟೆಗಳ ಕಾಲ ಪ್ರಸ್ತುಪಡಿಸಿದರು. 20 ಸಾವಿರ ವಿದ್ಯಾಥರ್ಿಗಳೊಂದಿಗೆ ಮೂಡುಬಿದಿರೆ ಆಸುಪಾಸಿನ 1 ಸಾವಿರಕ್ಕೂ ಅಧಿಕ ಜನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾಧಿಸಿದರು.








