ಹಾಸನ: ಕಾಣೆಯಾದ ಪತ್ನಿಗಾಗಿ ತನ್ನ ಪುಟ್ಟ ಮಗುವಿನೊಂದಿಗೆ ಪತಿ ಅಲೆದಾಡುತ್ತಿರುವ ಘಟನೆ ಹಾಸನದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ, ಅವಲಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿದ್ದ ಪತ್ನಿ ರುದ್ರಾಂಬಿಕೆ ಒಂದೂವರೆ ವರ್ಷದಿಂದ ಪತಿ ಮಂಜುನಾಥ್ ಮತ್ತು ಪುಟ್ಟ ಮಗುವನ್ನು ಬಿಟ್ಟು ಹೋಗಿದ್ದಾಳೆ. ಈ ಹಿನ್ನೆಲೆ ಮಂಜುನಾಥ್ಗೆ ರುದ್ರಾಂಬಿಕೆ ಹಾಸನದಲ್ಲಿ ಬೇರೆಯವರ ಜೊತೆ ಸಂಸಾರ ಮಾಡುತ್ತಿರುವುದು ತಿಳಿದುಬಂದಿದೆ.



ಪ್ರಸ್ತುತ ಪೊಲೀಸರು ಮಂಜುನಾಥ್ನನ್ನು ವಶಕ್ಕೆ ಪಡೆದು ಬಡಾವಣೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ತಾನು ಬಾಗಿಲು ಬಂದ್ ಮಾಡಿದ್ದ ಮನೆಯಲ್ಲೇ ಪತ್ನಿ ಇದ್ದಳು ಎಂದು ಮಂಜುನಾಥ್ ಆರೋಪ ಮಾಡುತ್ತಿದ್ದಾನೆ.
