ಸುದ್ದಿ 9 ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಕಲ್ಕುಟ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ಗೆ ಸಾಣೂರು ಪದವಿನಲ್ಲಿ ಜಿಲ್ಲಾ ಪಮಚಾಯತ್ ಸದಸ್ಯೆ ಜಯಶ್ರೀ ಕೆ.ಎ. ಅವರು ನ.5ರಂದು ಬುಧವಾರ ಶಿಲಾನ್ಯಾಸ ಮಾಡಿದರು.
ಜಿಲ್ಲಾ ಪಂಚಾಯತ್ ವತಿಯಿಂದ 6ಲಕ್ಷ ಅನುದಾನವನ್ನು ಪುದು ಜಿಲ್ಲಾ ಪಂಚಾಯತ್ ಸದಸ್ಯೆಜಯಶ್ರೀ ಕೆ ಎ ಅವರು ಕಲ್ಕುಟದ ಸುಮಾರು 150ಮನೆಗೆ ನೀರಿನ ಸಂಪರ್ಕ ಕಲ್ಪಿಸಿ ಕೊಡಲು 50ಸಾವಿರ ಲೀಟರ್ ನೀರಿನ ಟ್ಯಾಂಕ್ ಸಾಣೂರು ಪದವಿನಲ್ಲಿ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಕೃಷ್ಣ ಜೆಇ, ಪಿ ಡಿ ಓ ನವೀನ್ ಭಂಡಾರಿ ಗುತ್ತಿಗೆದಾರ ಯಶೋಧರ , ಕರಿಯಂಗಳ ಬಿಜೆಪಿ ಅಧ್ಯಕ್ಷ ಯಶವಂತ ಪೂಜಾರಿ ಕರಿಯಂಗಳ ಗ್ರಾಮ ಪಂ ಚಾಯತ್ ಸದಸ್ಯರಾದ ಉಮೇಶ್ ಆಚಾರ್ಯ, ರಾಜು ಪೂಜಾರಿ , ವಾಮನಪೂಜಾರಿ , ವಸಂತಿ ವಿಶ್ವನಾಥ ಮತ್ತು ವಾಮನ ಉಪಸ್ಥಿತರಿದ್ದರು.


