ಬಂಟ್ವಾಳ: ತಾಲ್ಲೂಕಿನ ಪೆರಿಯಪಾದೆ ಶ್ರೀ ದುಗಲಾಯ ಮತ್ತು ಕೊಡಮಣಿತ್ತಾಯ ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಗರ್ಭಗುಡಿ ನಿರ್ಮಾಣಕ್ಕೆ ಎ.25ರಂದು ಸೋಮವಾರ ಶಿಲಾನ್ಯಾಸ ನೆರವೇರಿತು.
ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮತ್ತು ತುಳು ವಿದ್ವಾಂಸ ಕೆ.ಕೆ.ಪೇಜಾವರ ಧಾರ್ಮಿಕ ಉಪನ್ಯಾಸ ನೀಡಿದರು. ಕ್ಷೇತ್ರದ ಮೊಕ್ತೇಸರ ರಘು ಶೆಟ್ಟಿ ಪಡ್ಡಾಯೂರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ ಕಾರಂತ, ಗಣಪತಿ ಮುಚ್ಚಿನ್ನಾಯ, ಪುರಸಭಾ ಹಿರಿಯ ಸದಸ್ಯ ಗೋವಿಂದ ಪ್ರಭು, ಮುನ್ನಲಾಯಿಗುತ್ತು ಮೋಹನದಾಸ ಶೆಟ್ಟಿ, ನಾಗೇಶ್ ಪೂಜಾರಿ ಉಜಿರಾಡಿಗುತ್ತು, ದಿನೇಶ್ ಪೂಜಾರಿ ಕುಜುಂಬೊಟ್ಟುಗುತ್ತು, ಟ್ರಸ್ಟ್ ಅಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯಾಧ್ಯಕ್ಷ ರವೀಂದ್ರ ಟಿ.ಸಿ. ಇದ್ದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಧನಂಜಯ ಶೆಟ್ಟಿ ಸರಪಾಡಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
