ನವದೆಹಲಿ: ವಾಹನ ಸವಾರರಿಗೆ ಇದೀಗ ಸುಗ್ಗಿಕಾಲ. ಯಾಕಂದ್ರೆ ಕಳೆದ ಆಗಸ್ಟ್ ನಿಂದ ಈಚೆಗೆ 6 ಬಾರಿ ಪೆಟ್ರೋಲ್ ದರ ಮತ್ತು ಎರಡು ಬಾರಿ ಡೀಸೆಲ್ ದರ ಇಳಿಕೆ ಕಂಡಿದೆ. ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರತುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರೆಲ್‘ಗೆ 86 ಡಾಲರ್‘ನಿಂದ 80 ಡಾಲರ್‘ಗೆ ಕುಸಿದಿದೆ. ಹೀಗಾಗಿ, ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುವುದು ನಿಚ್ಚಳವಾಗಿದೆ.

