ಉತ್ತರಪ್ರದೇಶ: ವಿರೋಧಿಗಳು ಮೋದಿಯನ್ನು ಚಹಾ ಮಾರುವವ ಎಂದು ಗೇಲಿ ಮಾಡಿದ್ದರ ಪರಿಣಾಮವಾಗಿ ಇಂದು ದೇಶದ ಪ್ರತೀ ಮೂಲೆಯಲ್ಲೂ ನಮೋ ಟೀ ಸ್ಟಾಲ್ ಎದ್ದು ನಿಂತಿವೆ. ಚಹಾ ಮಾರುವವನೊಬ್ಬ ದೇಶದ ಪ್ರಧಾನಿಯೂ ಆಗಬಹುದು ಇದು ಪ್ರಜಾತಾಂತ್ರಿಕ ದೇಶವೆಂದು ಮೋದಿ ಹಲವು ಬಾರಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ.
ಮೋದಿಯ ವಿರುದ್ಧ ಪ್ರಯೋಗಿಸುವ ಪ್ರತಿಯೊಂದು ಬಾಣ ಕೂಡಾ ಕಾಂಗ್ರೆಸ್ಗೆ ಮುಳುವಾಗಿ ಪರಿಣಮಿಸಿದೆ. ಟೀ ಮಾರುವವ ಎಂಬ ಟೀಕೆ ಕೂಡಾ ಕಾಂಗ್ರೆಸ್ ಪಾಳಯದ ನೆಮ್ಮದಿ ಕೆಡಿಸಿದೆ.
ಆದರೆ ಮೋದಿ ಟೀ ಸ್ಟಾಲ್ಗೆ ಪ್ರತಿಯಾಗಿ ಕಾಂಗ್ರೆಸಿಗರು ರಾಹುಲ್ ಹಾಲನ್ನು ಮಾರಲು ಮುಂದಾಗಿದ್ದು ಸದ್ಯ ಕುತೂಹಲಕ್ಕೆ ಗ್ರಾಸವಾಗಿದೆ. ಉತ್ತರಪ್ರದೇಶದ ಗೋರಖ್ಪುರದಲ್ಲಿ ಕಾಂಗ್ರೆಸ್ ಅಭಿಮಾನಿಗಳು ರಾಹುಲ್ ಗಾಂಧಿ ಹೆಸರಿನಲ್ಲಿ ಹಾಲು ಹಂಚಲು ಮುಂದಾಗಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ಇಡೀ ದೇಶದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳುವ ಇರಾದೆ ಕಾಂಗ್ರೆಸಿಗರದ್ದು. ಚುನಾವಣಾ ಪ್ರಚಾರದ ವಿಷಯದಲ್ಲಿ ಕಾಂಗ್ರೆಸ್ ಮೋದಿ ದಾರಿಯನ್ನೇ ಅನುಸರಿಸುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಅದಕ್ಕೆ ಸೇರ್ಪಡೆಯೆಂಬಂತೆ ಈಗ ರಾಹುಲ್ ಹಾಲು ಮಾರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ. ಏನೇ ಆದರೂ ಬೆಲೆಯೇರಿಕೆಯ ಈ ಸಮಯದಲ್ಲಿ ನಮೋ ಟೀ1 ರೂ,ಗೆ ಸಿಗುತ್ತಿದ್ದರೆ ರಾಹುಲ್ ಹಾಲು ಕುಡಾ ಕಡಿಮೆ ಬೆಲೆಯಲ್ಲಿ ಸಿಗಬಹುದು. ರಾಜಕೀಯ ವಿರೋಧಿಗಳ ಈಹೋರಾಟದ ಭರಪೂರಾ ಪ್ರಯೋಜನವನ್ನು ಸಾರ್ವಜನಿಕರು ತೆಗೆದುಕೊಳ್ಳಬಹುದು
