ಕೈಕಂಬ: ಡಯಟ್, ಹಿತಮಿತ ಆಹಾರ ಕ್ರಮ ಹಾಗೂ ನಿತ್ಯ ನಡಿಗೆ(೩೦ ನಿಮಿಷ) ಮತ್ತು ಆರಂಭಿಕ ಹಂತದ ಪತ್ತೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ. ಪ್ರತಿಯೊಬ್ಬರೂ ಆಯುರ್ವೇದದಲ್ಲಿ ತಿಳಿಸಲಾದ ಈ ಮೂರು ‘೩ಡಿ ಫಾರ್ಮುಲಾ’ ರೂಢಿಗತ ಮಾಡಿಕೊಳ್ಳಬೇಕು ಎಂದು ಆಯುರ್‌ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಮತ್ತು ಆಯುರ್‌ಸ್ಪರ್ಶ ಪಂಚಕರ್ಮ ಸೆಂಟರ್, ಚಿಕಿತ್ಸಾ ಕೇಂದ್ರದ ಅಧ್ಯಕ್ಷ ಡಾ. ಸತೀಶ್ ಶಂಕರ್ ಬಿ ಹೇಳಿದರು.gur-apl-15-bajpe police-1

ಮಧುಮೇಹಮುಕ್ತ ಭಾರತ ಅಭಿಯಾನದಂಗವಾಗಿ ಅಮಿಲ್ ಫಾರ್ಮಸಿಟಿಕಲ್ಸ್ ಜಂಟಿಯಾಗಿ ಬಜ್ಪೆಪೊ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹಮ್ಮಿಕೊಂಡ ‘ಮಧುಮೇಹ ಜಾಗೃತಿ, ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಧುಮೇಹ ನಿಯಂತ್ರಣ ಕುರಿತು ಅವರು ಉಪನ್ಯಾಸ ನೀಡುತ್ತ, ಒಟ್ಟು ಮಧುಮೇಹದಲ್ಲಿ ಶೇ ೯೫ರಷ್ಟು ಟೈಪ್೨ ಮಧುಮೇಹ ದಾಖಲಾಗಿದೆ. ಶೇಕಡವಾರು ಮಧುಮೇಹ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಮಧುಮೇಹ ಹೆಚ್ಚುತ್ತಲೇ ಇದೆ. ಬದಲಾದ ಜೀವನಶೈಲಿ, ವ್ಯಾಯಾಮರಹಿತ ಜೀವನ ಕ್ರಮ ಮತ್ತು ಅತಿಯಾದ ಒತ್ತಡದಿಂದ ರೋಗ ಉಲ್ಭಣಿಸುತ್ತಿದೆ. ಹಾಗಾಗಿ ಈ ಮೂರಂಶಗಳ ಮೇಲೆ ನಿಯಂತ್ರಣ ಅತ್ಯವಶ್ಯ ಎಂದರು.gur-apl-15-bajpe police-3

ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ ಜಿ ಸಹಕರಿಸಿದರು. ಎಸ್‌ಐಗಳಾದ ಪೂವಪ್ಪ, ರಾಘವೇಂದ್ರ ನಾಯ್ಕ್, ಪಿಎಸ್‌ಐ ಮೊಹಮ್ಮದ್ ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದ ಮಧುಮೇಹ ತಪಾಸಣೆಗೈಯಲಾಯಿತು. ಅಮಿಲ್ ಫಾರ್ಮಸಿಟಿಕಲ್ಸ್ನ ಪ್ರಾದೇಶಿಕ ಪ್ರಬಂಧಕ ಪ್ರಶಾಂತ್ ಶೆಟ್ಟಿ ಮತ್ತು ವೈದ್ಯಕೀಯ ಪ್ರತಿನಿಧಿ ರಾಜೇಶ್ವರಿಯವರು ಪೊಲೀಸರಿಗೆ ಕಂಪೆನಿ ವತಿಯಿಂದ ಉಚಿತ ಔಷಧಿ ವಿತರಿಸಿದರು.gur-apl-15-bajpe police-4

By Suddi9

Leave a Reply

Your email address will not be published. Required fields are marked *