ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ದಿ. ಅಬ್ದುಲ್ ಅಜೀಜ್ ಸ್ಮರಣಾರ್ಥ ಭಾನುವಾರ ನಡೆದ ಅವಿಭಜಿತ

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮರಿಪಾದೆ ಕೋಡಿ-ಚೆನ್ನಯ ತಂಡ ಪ್ರಥಮ ಸ್ಥಾನ ಗೆದ್ದು ‘ಕಿತ್ತೂರು ರಾಣಿ ಚೆನ್ನಮ್ಮ’ ಯುವ ಪ್ರಶಸ್ತಿಗೆ ಆಯ್ಕೆಯಾಗಿದೆ.

4btl-1
ಹಿರಿಯ ವಾಲಿಬಾಲ್ ಆಟಗಾರ ದಿ.ಅಬ್ದುಲ್ ಅಜೀಜ್ ಇವರ ಪುತ್ರ ಅಶಾಕ್ ಮೊಹಮ್ಮದ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ಶುಭ ಹಾರೈಸಿದರು.

ಬಂಟ್ವಾಳ ರೋಟರಿ ಕ್ಲಬ್ನ ಅಧ್ಯಕ್ಷ ಎನ್. ಪ್ರಕಾಶ್ ಕಾರಂತ್, ಬಂಟ್ವಾಳ ಪುರಸಭಾ ಸದಸ್ಯ ಬಿ.ದೇವದಾಸ ಶೆಟ್ಟಿ ಉದ್ಯಮಿಗಳಾದ ಓಂಪ್ರಸಾದ್, ಲೋಕೇಶ್ ಬಂಟ್ವಾಳ, ನಿತ್ಯಾನಂದ ಪೂಜಾರಿ ಸಿದ್ಧಕಟ್ಟೆ , ಉಮೇಶ್ ಪೂಜಾರಿ ಬಂಟ್ವಾಳ, ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಂಘದ ಅಧ್ಯಕ್ಷ ಕೃಷ್ಣಪ್ಪಬಂಗೇರ,

ರಾಷ್ಟ್ರೀಯ ಕಬಡ್ಡಿ ಆಟಗಾರ ಬೇಬಿ ಕುಂದರ್, ಕಬಡ್ಡಿ ಎಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಸಂಘಟಕ ಪ್ರಭಾಕರ ಅಮೀನ್, ಸ್ವಸ್ತಿಕ್ ಕ್ಲಬ್ನ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಅಧ್ಯಕ್ಷ ಪ್ರಶಾಂತ್ ಎಂ., ಮಾಜಿ ಅಧ್ಯಕ್ಷರಾದ ಮಾಧವ ಬಂಗೇರ, ಪ್ರಭಾಕರ ಪಿ.ಎಂ.,

ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿ ಸಂಚಾಲಕ ಫ್ರಾನ್ಸಿಸ್ ವಿ.ವಿ., ರಾಷ್ಟ್ರೀಯ ತೀರ್ಪುಗಾರರಾದ ಕೃಷ್ಣಾನಂದ ರಾವ್, ಜಗದೀಶ್ ಜೈನ್, ದೈಹಿಕ ಶಿಕ್ಷಕ ರಮೇಶ್ ಮೂಲ್ಯ, ಪ್ರಮುಖರಾದ ರಾಜೇಶ್ ಪುಳಿಮಜಲು, ಜಯರಾಜ ಅತ್ತಾಜೆ ಮತ್ತಿತರರು ಇದ್ದರು.

ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಮದೇವ ರಾವ್ ಮುಂಡಾಜೆ ಮತ್ತು ಅತ್ಯುತ್ತಮ ಶಿಕ್ಷಕ ರಾಮ ಪಿ. ಸಾಲ್ಯಾನ್ ಇವರನ್ನು ಸಮ್ಮಾನಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸ್ವಾಗತಿಸಿ ವಂದಿದರು.

By suddi9

Leave a Reply

Your email address will not be published. Required fields are marked *